ಕೈಕೊಟ್ಟ ಮಾಜಿ ಪ್ರೇಯಸಿಯ ಮೂಗು ಕಚ್ಚಿ ಪಾಗಲ್ ಪ್ರೇಮಿ ಹಲ್ಲೆ!

Public TV
1 Min Read
love complaint 1

ಅಹಮದಾಬಾದ್: 2 ವರ್ಷಗಳ ಹಿಂದೆ ಕೈಕೊಟ್ಟು ಹೋಗಿದ್ದ ಮಾಜಿ ಪ್ರೇಯಸಿ ಮೋಸ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೂಗು ಕಚ್ಚಿ ಹಲ್ಲೆ ನಡೆಸಿದ ಘಟನೆ ಗುಜರಾತ್‍ನ ಚಂದೇಖಾದ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನ ಮೂಲದ ಕೇಶವ್‍ಲಾಲ್ ಭೋದಟ್ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ. ಯುವತಿ ಕೂಡ ಮೂಲತಃ ಆರೋಪಿ ಊರಿನವಳಾಗಿದ್ದಾಳೆ. ಆದ್ರೆ ಎರಡು ವರ್ಷದ ಹಿಂದೆ ಕೇಶವ್‍ಲಾಲ್‍ಗೆ ಕೈ ಕೊಟ್ಟು ಯುವತಿ ಚಂದೇಖಾದದಲ್ಲಿದ್ದ ತನ್ನ ಅಕ್ಕನ ಮನೆಗೆ ಬಂದಳು. ಬಳಿಕ ಊರಿನತ್ತ ಮುಖ ಕೂಡ ಮಾಡಿಲ್ಲ. ಹಾಗೆಯೇ ಚಂದೇಖಾದದಲ್ಲಿಯೇ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

lovers

ಆದ್ರೆ ಯುವತಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕೇಶವ್‍ಲಾಲ್ ಸ್ನೇಹಿತನೊಬ್ಬ ಕೆಲಸ ಮಾಡುತ್ತಿದ್ದನು. ಯುವತಿ ಕೆಲಸ ಮಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಗೆಳೆಯ ಕೇಶವ್‍ಲಾಲ್‍ಗೆ ಮಾಹಿತಿ ನೀಡಿದ್ದಾನೆ. ಬಳಿಕ ಆತ ಯುವತಿಯನ್ನು ಹುಡುಕಿಕೊಂಡು ಚಂದೇಖಾದಕ್ಕೆ ಬಂದಿದ್ದಾನೆ. ಈ ವೇಳೆ ಯುವತಿ ಅವನಿಗೆ ಕ್ಯಾರೆ ಅಂದಿಲ್ಲ. ಇದರಿಂದ ಸಿಟ್ಟಿಗೆದ್ದ ಯುವಕ, ಆಕೆ ಮೂತ್ರ ವಿಸರ್ಜನೆ ಮಾಡಿಕೊಂಡು ವಾಪಾಸ್ ಬರುತ್ತಿದ್ದಾಗ ಅವಳ ಬಳಿ ಯಾಕೆ ತನ್ನನ್ನು ಬಿಟ್ಟು ಹೋಗಿದ್ದು ಎಂದು ಕೇಳಿದ್ದಾನೆ. ಆಗ ಯುವತಿ ನಿನ್ನ ಜೊತೆ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಯುವಕ ಆಕೆಯ ಮೂಗು ಕಚ್ಚಿ ಹಲ್ಲೆ ಮಾಡಿದ್ದಾನೆ.

POLICE 15

ಈ ವೇಳೆ ಯುವತಿ ಜೋರಾಗಿ ಕೂಗಿದ್ದಾಳೆ. ಪರಿಣಾಮ ಜನರು ಅವಳ ಬಳಿ ಬರುತ್ತಿದ್ದಂತೆ ಯುವಕ ಎಸ್ಕೇಪ್ ಆಗಿದ್ದಾನೆ. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಸಹಾಯ ಮಾಡಿದ್ದಾರೆ. ಯುವತಿ ಪೊಲೀಸರಿಗೆ ಕೇಶವ್‍ಲಾಲ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *