Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

Bengaluru City

ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

Public TV
Last updated: March 25, 2019 3:07 pm
Public TV
Share
2 Min Read
Shruti Prakahs
SHARE

ಬೆಂಗಳೂರು: ಶ್ರುತಿ ಪ್ರಕಾಶ್ ಮೂಲತಃ ಕನ್ನಡತಿಯೇ ಆಗಿದ್ದರೂ ಈ ಬಿಗ್ ಬಾಸ್ ಶೋ ಮೂಲಕವೇ ಕನ್ನಡಿಗರಿಗೆ ಪರಿಚಯವಾದ ಹುಡುಗಿ. ಕಳೆದ ಸೀಸನ್ನಿನ ಈ ಶೋನಲ್ಲಿ ಮುಖ ಮುಖವಾಡಗಳ ಸಂತೆಯ ನಡುವೆಯೂ ನೈಜ ವ್ಯಕ್ತಿತ್ವ ಮರೆಮಾಚದೆ ಕನ್ನಡಿಗರ ಮನ ಗೆದ್ದಿದ್ದವರು ಶ್ರುತಿ. ಈ ಶೋ ಮುಗಿದ ನಂತರ ತನ್ನೆದುರು ಅವಕಾಶಗಳ ಮೆರವಣಿಗೆಯೇ ನೆರೆದಿದ್ದರೂ ಕೂಡಾ ಅವರು ಪ್ರೀತಿಯಿಂದ ಆರಿಸಿಕೊಂಡಿದ್ದು ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು. ಈ ಬಗ್ಗೆ ಒಂದಷ್ಟು ಮಜವಾದ ವಿಚಾರಗಳನ್ನ ಶ್ರುತಿ ಪಬ್ಲಿಕ್ ಟಿವಿಯ ಜೊತೆ ಹಂಚಿಕೊಂಡಿದ್ದಾರೆ.

Shruti Prakash A

ಶ್ರುತಿ ಪ್ರಕಾಶ್ ಮೂಲತಃ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯವರು. ಹಿಂದಿ ಭಾಷೆಯಲ್ಲಿ ನಾನಾ ಹಿಟ್ ಧಾರಾವಾಹಿಗಳ ಮೂಲಕ, ಮ್ಯೂಸಿಕ್ ಆಲ್ಬಂಗಳ ಮೂಲಕ ಪ್ರಸಿದ್ಧಿ ಹೊಂದಿದ್ದರೂ ಈ ಕನ್ನಡತಿಯ ಪರಿಚಯ ಕನ್ನಡಿಗರಿಗೇ ಇರಲಿಲ್ಲ. ಬೆಳಗಾವಿಯ ಕನ್ನಡತನದ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಮುಂಬೈನಲ್ಲಿ ತಮ್ಮ ಕನಸಿನ ಆರಂಭ ಮಾಡಿದ್ದ ಶ್ರುತಿಗೆ ಅಲ್ಲಿ ಅಗಾಧವಾದ ಪ್ರಸಿದ್ಧಿ ಸಿಕ್ಕರೂ ಕೂಡಾ ಅದೊಂದು ಕೊರಗು ಮಾತ್ರ ಅವರನ್ನು ಬೆಂಬಿಡದೆ ಕಾಡುತ್ತಿತ್ತಂತೆ. ಅದು ತಮ್ಮ ತಾಯಿಭಾಷೆಯಾದ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಅಡಿಯಿರಿಸಿ ಕನ್ನಡಿಗರನ್ನೆಲ್ಲ ತಲುಪಿಕೊಳ್ಳುವ ಹಂಬಲ!

ಮೊದಲು ತನ್ನನ್ನು ತಾನು ಕನ್ನಡಿಗರೆಂದು ಪರಿಚಯ ಮಾಡಿಕೊಂಡು ಮತ್ತೆ ಮುಂದುವರೆಯಬೇಕು ಅಂದುಕೊಂಡಿದ್ದ ಶ್ರುತಿ ಅವರಿಗೆ ಬಿಗ್ ಬಾಸ್ ಶೋ ವರದಾನವಾಗಿದೆ. ಈ ಮೂಲಕ ಕನ್ನಡಿಗರ ಮನೆಮಗಳಂತೆ ಆಗಿಹೋಗಿರೋ ಶ್ರುತಿ ಅವರು ರಾಜ್ ಸೂರ್ಯ ಹೇಳಿದ ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಾರಂತೆ. ಅದಕ್ಕೆ ಕಾರಣ ಗಂಭೀರವಾದ ಕಥೆ ಮತ್ತು ಮಜವಾದ ನಿರೂಪಣೆ.

Shruti Prakash B

ಈ ಚಿತ್ರದ ಮೂಲಕವೇ ಶ್ರುತಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಅವರದ್ದು ನಾನಾ ಶೇಡುಗಳಿರೋ ಪಾತ್ರವಂತೆ. ಇಲ್ಲವರು ಪ್ರತಿಯೊಂದು ವಿಚಾರವನ್ನೂ ಕೂಡಾ ಅಳೆದೂ ತೂಗಿ ಆಲೋಚಿಸಿಯೇ ಮುಂದಡಿ ಇಡುವ ಪ್ರಾಕ್ಟಿಕಲ್ ಹುಡುಗಿಯಾಗಿ ಮಿಂಚಿದ್ದಾರಂತೆ. ಇವರ ಜೋಡಿ ಲಂಬೋದರ ಪ್ರತೀ ನಿತ್ಯ ಎದ್ದೇಟಿಗೆ ದಿನಭವಿಷ್ಯ ನೋಡಿ ಅದರಂತೆಯೇ ಮುಂದುವರೆಯುವಾತ. ಅಂಥಾ ಕ್ಯಾರೆಕ್ಟರ್ ಮತ್ತು ಈ ಪ್ರಾಕ್ಟಿಕಲ್ ಹುಡುಗಿಯ ಕಾಂಬಿನೇಷನ್ನೇ ಈ ಸಿನಿಮಾದ ಪ್ರಧಾನ ಆಕರ್ಷಣೆ.

ಈ ಚಿತ್ರದ ಮೂಲಕವೇ ತಮಗೆ ಕನ್ನಡದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಕೊಡಲಿದೆ ಅನ್ನೋ ಭರವಸೆ ಶ್ರುತಿ ಪ್ರಕಾಶ್ ಅವರಿಗಿದೆ. ಲಂಬೋದರನ ಕಾರಣದಿಂದಲೇ ಇನ್ನೂ ಒಂದಷ್ಟು ಅವಕಾಶಗಳು ಅವರ ಮುಂದಿವೆ. ಆದರೆ ಈ ಚಿತ್ರ ಬಿಡುಗಡೆಯಾದ ನಂತರವೇ ಆ ಬಗ್ಗೆ ಆಲೋಚಿಸುವ ನಿರ್ಧಾರ ಶ್ರುತಿ ಅವರದ್ದು. ಈ ನಡುವೆ ಹಿಂದಿ ಸೀರಿಯಲ್ಲುಗಳ ಅವಕಾಶ ಬಂದರೂ ನಿರಾಕರಿಸುತ್ತಿರೋ ಅವರ ಪಾಲಿಗೆ ಕನ್ನಡದಲ್ಲಿಯೇ ನೆಲೆಗೊಳ್ಳೋ ಆಸೆಯಿದೆ. ಲಂಡನ್ ನಲ್ಲಿ ಲಂಬೋದರ ಸೃಷ್ಟಿಸಿರೋ ಕ್ರೇಜ್ ನೋಡಿದರೆ ಅದು ಸಾಧ್ಯವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

TAGGED:belagaviBigg Boss Shruthi Prakashkannada cinemaLondonnalli LambodaraRaj SuryaShruti Prakashಕನ್ನಡ ಸಿನೆಮಾಬಿಗ್ ಬಾಸ್ ಶೃತಿ ಪ್ರಕಾಶ್ಬೆಳಗಾವಿರಾಜ್ ಸೂರ್ಯಲಂಡನ್‍ನಲ್ಲಿ ಲಂಬೋದರಶೃತಿ ಪ್ರಕಾಶ್
Share This Article
Facebook Whatsapp Whatsapp Telegram

Cinema news

Bigg Boss runner up Rakshita Shetty gets a grand welcome in Padubidri
ತೆರೆದ ವಾಹನದಲ್ಲಿ ಮೆರವಣಿಗೆ – ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ
Cinema Districts Karnataka Latest Main Post TV Shows Udupi
kantara chapter 1
ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ ಕಾಂತಾರ ಚಾಪ್ಟರ್ 1
Cinema Latest Sandalwood Top Stories
Udaya Kannadiga 2025
ವರ್ಣರಂಜಿತ ಉದಯ ಕನ್ನಡಿಗ-2025 ಪುರಸ್ಕಾರದಲ್ಲಿ ತಾರಾಮೇಳ
Cinema Latest Sandalwood Top Stories TV Shows
Gilli Kavya 1
BBK 12 | ಗಿಲ್ಲಿಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಕಾವ್ಯ ಕೊಟ್ಟ ಉತ್ತರವೇನು?
Cinema Latest Top Stories TV Shows

You Might Also Like

Thawar Chand Gehlot Siddaramaiah
Bengaluru City

ಬಿಕ್ಕಟ್ಟಿಗೆ ಬ್ರೇಕ್‌ – ರಾಜ್ಯಪಾಲರು ಅಧಿವೇಶನಕ್ಕೆ ಬರ್ತಾರೆ; ಲೋಕಭವನದಿಂದ ಸರ್ಕಾರಕ್ಕೆ ಅಧಿಕೃತ ಮಾಹಿತಿ

Public TV
By Public TV
39 seconds ago
NAGENDRA
Bengaluru City

ವಾಲ್ಮೀಕಿ ಹಗರಣ | ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ – ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಸಿಬಿಐ ಅರ್ಜಿ

Public TV
By Public TV
8 minutes ago
MUDA Scam Siddaramaiah
Bengaluru City

ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ಬಿಗ್ ಡೇ

Public TV
By Public TV
12 minutes ago
CM Ponnanna
Bengaluru City

ರಾಜ್ಯಪಾಲರು 100% ಅಧಿವೇಶನಕ್ಕೆ ಬರ್ತಾರೆ, ಭಾಷಣ ಓದುತ್ತಾರೆ: ಪೊನ್ನಣ್ಣ ವಿಶ್ವಾಸ

Public TV
By Public TV
19 minutes ago
Karachi Fire
Latest

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ದುರಂತ – ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸ್ರು!

Public TV
By Public TV
43 minutes ago
Bike Showroom bengaluru
Bengaluru City

ಶಾರ್ಟ್ ಸರ್ಕ್ಯೂಟ್‌ನಿಂದ ಶೋರೂಂಗೆ ಬೆಂಕಿ – 13 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?