ಬೆಂಗಳೂರು: ಮಾಜಿ ಸಂಸದೆ ರಮ್ಯಾ ಅವರ ಸೋಲಿನ ನೋವು ನನ್ನ ಮನಸ್ಸಿನಲ್ಲಿ ಇನ್ನೂ ಇದೆ. ಮರೆಯೋದಕ್ಕೆ ಆಗ್ತಿಲ್ಲ ಎಂಬ ವಿಷಯ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಇದೆ. ಸದ್ಯ ಈಗ ಮಂಡ್ಯ ಅಖಾಡದಲ್ಲಿ ಸುಮಲತಾ ವಿರುದ್ಧ ರಮ್ಯಾ ಆಪ್ತ ವಲಯ ಮಸಲತ್ತು ನಡೆಯುತ್ತಿದೆ.
ದೆಹಲಿಯಲ್ಲೇ ಕುಳಿತು ರಮ್ಯಾ ಮುಯ್ಯಿಗೆ ಮುಯ್ಯಿ ರಾಜಕಾರಣ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕಣದಿಂದ ಸೋತಿದ್ದರು. ಆಗ ಅಂಬರೀಶ್ ಬೆಂಬಲಿಗರು ಕಾಟ ಕೊಟ್ಟಿದ್ರು ಎಂದು ಆರೋಪ ಮಾಡಲಾಗಿತ್ತು.
ಇಂದು ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಇದನ್ನೇ ರಾಜಕೀಯ ಟಾಂಗ್‍ಗೆ ರಮ್ಯಾ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಮಂಡ್ಯದಲ್ಲಿರುವ ರಮ್ಯಾ ಆಪ್ತರಿಂದಲೇ ಅಖಾಡದಲ್ಲಿ ಒಳಗುದ್ದು ಶುರುವಾಗಿದೆ.
ಈ ವಿಚಾರ ತಿಳೀಯುತ್ತಿದ್ದಂತೆಯೇ ಅಂಬರೀಶ್ ಅಭಿಮಾನಿಗಳು ಮಾಜಿ ಸಂಸದೆ ವಿರುದ್ಧ ಗರಂ ಆಗಿದ್ದಾರೆ. 2013ರಲ್ಲಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ರಮ್ಯಾ ಜೊತೆ ಮಂಡ್ಯದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದು ಮರೆತ್ರಾ ಎಂದು ಕಿಡಿಕಾರುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.