ಬಾಗಲಕೋಟೆ: ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಮ್ಮ ತಂದೆಯವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಸಾಮಾನ್ಯರಂತೆ ತಂದೆಯೊಂದಿಗೆ ನವನಗರದ ಜಿಲ್ಲಾಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಸರತಿಯಲ್ಲಿ ನಿಂತು ತಂದೆಗೆ ಚಿಕಿತ್ಸೆ ಕೊಡಿಸುವ ಮೂಲಕ ಸರಳತೆ ಮೆರೆದಿದ್ದಾರೆ. ಜಿಲ್ಲಾಧಿಕಾರಿಗಳ ತಂದೆ ರಾಮಸ್ವಾಮಿ (74) ಕಿವಿ, ಎದೆ ಹಾಗು ಗಂಟಲು ನೋವಿನಿಂದ ಬಳಲುತ್ತಿದ್ದರು. ಜಿಲ್ಲಾಸ್ಪತ್ರೆಯ ಡಾ. ಸಂಗಮ ಮತ್ತು ಡಾ.ಪಾಟೀಲ್ ಅವರಿಂದ ತಂದೆಗೆ ಚಿಕಿತ್ಸೆ ಕೊಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಹೆಜ್ಜೆಗೊಂದು ಖಾಸಗಿ ಆಸ್ಪತ್ರೆಗಳಿರೋದನ್ನು ಕಾಣಬಹುದು. ಜಿಲ್ಲಾಧಿಕಾರಿಗಳ ನಿವಾಸದ ಕೂಗಳತೆಯಲ್ಲಿ ಖಾಸಗಿ ಆಸ್ಪತ್ರೆಗಳಿದ್ದರೂ, ತಂದೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಉನ್ನತ ಹುದ್ದೆಯಲ್ಲಿಯರುವವರು, ತಮ್ಮ ಮಕ್ಕಳನ್ನು ಎಂದಿಗೂ ಹೈ-ಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ ಸಂಗತಿ. ಕರ್ನಾಟಕ ಮೂಲದವರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ತಮ್ಮ ಮಗಳನ್ನು ದುಬಾರಿ ಖಾಸಗಿ ಶಾಲೆಗೆ ಸೇರಿಸದೇ ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದರು. ಉತ್ತರಾಖಂಡನ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಭಡೌರಿಯಾರವರು ತಮ್ಮ ಎರಡೂವರೆ ವರ್ಷದ ಮಗ ಅಭ್ಯುದಯ್ ನನ್ನು ಅಂಗನವಾಡಿಗೆ ಸೇರಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv