ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮೀಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗ ವಿಜಯಲಕ್ಷ್ಮಿ ತಮಗೆ ನಟನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮೀ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದಾರೆ.
ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದೇನೆ. ಹಣಕಾಸಿನ ನೆರವು ನೀಡಿ ಅಂತ ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಅವಶ್ಯವಿರುವ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ವಿಜಯಲಕ್ಷ್ಮೀ ಆರೋಪಿಸಿದ್ದಾರೆ.
ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರೋ ವಿಚಾರ ತಿಳಿದ ನಟ ರವಿಪ್ರಕಾಶ್, ನಟಿ ವಿಜಯಲಕ್ಷ್ಮೀಯ ಆರೋಪದಿಂದ ಶಾಕ್ ಆಗಿದ್ದಾರೆ. ಮಾಧ್ಯಮಗಳಲ್ಲಿ ಸಹಾಯ ಮಾಡಿ ಅಂತಾ ಕೇಳುತ್ತಿದ್ದ ವಿಡಿಯೋ ನೋಡಿ, ಒಂದು ಲಕ್ಷ ಹಣ ಸಹಾಯ ಮಾಡಿದೆ. ಅವರಿಗೆ ಹಾಕೋಕೆ ಬಟ್ಟೆ ಸಹ ಇರಲಿಲ್ಲ. ಮಾನವೀಯತೆ ಆಧಾರದಲ್ಲಿ ಊಟ, ಬಟ್ಟೆ, ಹಣ್ಣು, ಮಾತ್ರೆ ಎಂದು ಸಹಾಯ ಮಾಡಿದೆ. ಅವರ ಬಳಿ ಮಾತಾಡಿರೋ ಕಾಲ್ ರಿಕಾರ್ಡ್, ಮಸೇಜ್‍ಗಳು, ಎಲ್ಲಾ ಇದೆ. ನನಗೆ ಯಾವುದೇ ಕೆಟ್ಟಭಾವನೆ ಇಲ್ಲ. ಕಷ್ಟದಲ್ಲಿದ್ದಾರೆ ಎಂದು ಸಹಾಯ ಮಾಡಿದ್ದೆ ತಪ್ಪಾ ಎಂದು ನಟ ರವಿ ಪ್ರಕಾಶ್ ಹೇಳಿದ್ದಾರೆ.
ಸದ್ಯಕ್ಕೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv