`ದುರಹಂಕಾರಿ ಕುಮಾರಸ್ವಾಮಿ’- ಎಚ್‍ಡಿಕೆ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ

Public TV
1 Min Read
CM HDK 1

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಂಬಿ ಎದುರು ಎಚ್ ಡಿಕೆ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಫೋಟೋದೊಂದಿಗೆ `ಅಂಬರೀಶ್ ಕೊಡುಗೆ ಏನೂ ಅನ್ನೋ ದುರಹಂಕಾರಿ ಕುಮಾರಸ್ವಾಮಿಯವರು ಅವತ್ತು ಅಂಬರೀಶ್ ಎದುರು ಕೈ ಕಟ್ಟಿ ನಿಲ್ಲುತ್ತಿದ್ದರು ಎಂದು ಕಿಡಿಕಾರಿದ್ದಾರೆ.

ಸಿನಿಮಾವೊಂದರ ಶೂಟಿಂಗ್ ವೇಳೆ ಅಂಬರೀಶ್ ಜೊತೆ ಕುಮಾರಸ್ವಾಮಿ, ನಿಖಿಲ್, ತಮ್ಮಣ್ಣ ತೆಗೆಸಿಕೊಂಡಿದ್ದರು. ಇದರಲ್ಲಿ ಅಂಬಿ ಎದುರು ಎಚ್‍ಡಿಕೆ ಕೈ ಕಟ್ಕೊಂಡು ನಿಂತಿದ್ದು, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

vlcsnap 2019 03 08 07h58m03s207 e1552012246299

ಹುಲಿ ಇದ್ದಾಗ ಉಪಯೋಗಿಸಿಕೊಂಡ ಇಲಿಗಳು, ಇವತ್ತು ತಾವೇ ಹುಲಿಗಳು ಅಂದುಕೊಂಡಿವೆ. ಈ ಹಿಂದೆ ಸಚಿವ ಡಿ ಸಿ ತಮ್ಮಣ್ಣ ಪೋಸ್ಟರ್ ಗಳಲ್ಲಿ ಅಂಬರೀಶ್ ಫೋಟೋ ಮಿಂಚುತಿತ್ತು. ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಅಂಬರೀಶ್‍ರಿಂದ ಆಶೀರ್ವಾದ ಪಡೆದಿದ್ದರು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.  ಇದನ್ನೂ ಓದಿ: ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

ಡಿನ್ನರ್ ಸಭೆ: ಇತ್ತ ಇಂದು ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪ್ರಮುಖರ ಡಿನ್ನರ್ ಸಭೆ ಕಳೆದ ರಾತ್ರಿ ಬೆಂಗಳೂರಿನ ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ನಡೆದಿದೆ. ಈ ವೇಳೆ ನಿಖಿಲ್ ಕುಮಾರಸ್ವಾಮಿಯೇ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿದ್ದು, ನಿಖಿಲ್‍ರನ್ನ ಗೆಲ್ಲಿಸಿಕೊಂಡು ಬನ್ನಿ  ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

vlcsnap 2019 03 08 07h57m57s137

ಸಭೆಯಲ್ಲಿ ಸಚಿವರಾದ ಸಿ ಎಸ್ ಪುಟ್ಟರಾಜು, ಡಿ ಸಿ ತಮ್ಮಣ್ಣ, ಸಂಸದ ಶಿವರಾಮೇಗೌಡ, ಎಂಎಲ್‍ಸಿ ಶ್ರೀಕಂಠೇಗೌಡ ಭಾಗಿಯಾಗಿದ್ದರು. ನಿಖಿಲ್ ಕುಮಾರಸ್ವಾಮಿಯನ್ನೇ ಪಕ್ಷದ ಅಭ್ಯರ್ಥಿ ಮಾಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಜೆಡಿಎಸ್ ಮುಖಂಡರು ಸಿಎಂ ಕುಮಾರಸ್ವಾಮಿಗೆ ಮಾತು ಕೊಟ್ಟಿದ್ದಾರೆ. ನಿಖಿಲ್ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ, ಹೀಗಾಗಿ ಕಾಂಗ್ರೆಸ್‍ನಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

https://www.youtube.com/watch?v=2n1usFT7t6E

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *