ಬೆಂಗಳೂರು: ಗಿರೀಶ್ ನಿರ್ದೇಶನದ ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾ ಕಡೇ ಕ್ಷಣದ ಹೊತ್ತಿನಲ್ಲಿ ಭರ್ಜರಿಯಾಗಿಯೇ ಜನರನ್ನೆಲ್ಲ ತಲುಪಿಕೊಂಡಿರೋದು ಹೊಸ ಹೊಳಹಿನ ಮೂಲಕವೇ. ಯಾವುದೇ ಪ್ರಚಾರದ ಭರಾಟೆಯಿಲ್ಲದೆಯೂ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದು ತನ್ನೊಳಗಿನ ವಿಶೇಷತೆಗಳ ಕಾರಣದಿಂದ.
ಇದು ಹಾರರ್ ಚಿತ್ರ. ಹಾಗೆಂದಾಕ್ಷಣ ಮಾಮೂಲಿಯಾಗಿ ಭಯ ಬೀಳಿಸೋ ಸಿದ್ಧ ಸೂತ್ರಗಳನ್ನು ಹೊಂದಿರೋ ಸಿನಿಮಾ ಅನ್ನೋ ನಿರ್ಧಾಕ್ಕೆ ಬರುವಂತಿಲ್ಲ. ಯಾಕಂದ್ರೆ ಇದನ್ನು ಪ್ರತಿಯೊಂದು ವಿಚಾರದಲ್ಲಿಯೂ ನವೀನ ಪ್ರಯೋಗಗಳೊಂದಿಗೇ ರೂಪಿಸಲಾಗಿದೆ.
ಶೀರ್ಷಿಕೆಯಲ್ಲಿಯೇ ಒಂದು ಕಥೆ ಹೇಳ್ಲಾ ಅಂತಿದ್ದರೂ ಇಲ್ಲಿ ಹೇಳಿರೋದು ಐದು ಕಥೆ. ಅವೆಲ್ಲವೂ ಸತ್ಯ ಘಟನೆಯಿಂದ ಪ್ರೇರಿತವಾದ ಹಾರರ್ ಕಥೆಗಳೇ ಅನ್ನೋದು ವಿಶೇಷ. ಇನ್ನು ಬೆಚ್ಚಿಬೀಳಿಸಲೇಬೇಕು ಅನ್ನೋ ಒತ್ತಾಯವಿಲ್ಲದೆ ಸಹಜವಾಗಿ ಭಯ ಹುಟ್ಟಿಸೋ ಅನೇಕ ಸನ್ನಿವೇಶಗಳು ಈ ಚಿತ್ರದಲ್ಲಿವೆ.
ಇದೆಲ್ಲ ಕಥೆಯ ವಿಚಾರವಾದರೆ, ತಾಂತ್ರಿಕವಾಗಿಯೂ ಈ ಸಿನಿಮಾ ಭಿನ್ನವಾಗಿ ದಾಖಲಾಗಲಿದೆ. ಸ್ಕ್ರೀನ್ ಪ್ಲೇಯಲ್ಲಂತೂ ಗಿರೀಶ್ ಕನ್ನಡಕ್ಕೆ ತಾಜಾ ಅನ್ನಿಸುವಂಥಾ ಹೊಸಾ ಸರ್ಕಸ್ಸು ನಡೆಸಿದ್ದಾರೆ. ಇದೆಲ್ಲವೂ ಖಂಡಿತಾ ಜನರಿಗೆ ಇಷ್ಟವಾಗುತ್ತೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.