ಶತಕ ಸಿಡಿಸಿ ರಿಕಿ ಪಾಟಿಂಗ್ ದಾಖಲೆ ಮುರಿದ ಕ್ಯಾಪ್ಟನ್ ಕೊಹ್ಲಿ

Public TV
1 Min Read
kohli

ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 9 ಸಾವಿರ ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

9 ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ 6ನೇ ನಾಯಕರಾಗಿರುವ ಕೊಹ್ಲಿ, ಕೇವಲ 159 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಆಸೀಸ್ ಮಾಜಿ ನಾಯಕ ರಿಕಿ ಪಾಟಿಂಗ್ 204 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಉಳಿದಂತೆ ಗ್ರೇಮ್ಸ್ ಸ್ಮಿತ್ 220 ಇನ್ನಿಂಗ್ಸ್, ಧೋನಿ 253 ಇನ್ನಿಂಗ್ಸ್, ಅಲಾನ್ ಬರ್ಡರ್ 257 ಇನ್ನಿಂಗ್ಸ್, ಸ್ಟಿಫನ್ ಫ್ಲೆಮಿಂಗ್ 272 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಗಳಿಸಿದ್ದರು.

ಆಸೀಸ್ ವಿರುದ್ಧ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಕಳೆದ 6 ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 91, 59, 117, 0, 92, 116 ರನ್ ಗಳಿಸಿದ್ದಾರೆ. ಅಲ್ಲದೇ ಇಂದಿನ ಪಂದ್ಯದಲ್ಲಿ ಶತಕದ ಸಾಧನೆಯನ್ನು ಮಾಡಿದ್ದು, ಏಕದಿನ ಕ್ರಿಕೆಟ್‍ನಲ್ಲಿ 40ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇದು 18ನೇ ಶತಕವಾಗಿದೆ.

ಇತ್ತ ಏಕದಿನ ಕ್ರಿಕೆಟ್‍ನಲ್ಲಿ ಸಚಿನ್ 49 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು, ಸಚಿನ್‍ರನ್ನು ಹಿಂದಿಕ್ಕಲು ಕೊಹ್ಲಿಗೆ ಕೇವಲ 10 ಶತಕಗಳ ಅಗತ್ಯವಿದೆ. ಒಟ್ಟಾರೆ ಅಂತರಾಷ್ಟ್ರಿಯ ಕ್ರಿಕೆಟ್‍ನಲ್ಲಿ ಕೊಹ್ಲಿ 65 ಶತಕ ಸಿಡಿಸಿದ್ದು, ಟಿ20 ಮಾದರಿಯಲ್ಲಿ ಶತಕ ದಾಖಲಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *