ಯಾದಗಿರಿ: ದಿನೇ ದಿನೇ ಕರ್ನಾಟಕದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಮಾತನಾಡಿ, ಅವರನ್ನೇ ಬೆಂಬಲಿಸುವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಲಾತಾಣದಲ್ಲಿ ದೇಶ ದ್ರೋಹಿ ಪೋಸ್ಟ್ ಹಾಕಿದ್ದ ಶಹಾಪುರ ತಾಲೂಕಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬುರಾನ್ ಬಡಿಗೇರ (25) ದೇಶ ದ್ರೋಹಿ ಪೋಸ್ಟ್ ಹಾಕಿದ್ದ ಯುವಕ. ಈತ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಲ್ಲದಪುರ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಈತ ಮಿಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುವ ವೇಳೆ ದೇಶ ದ್ರೋಹಿ ಪೋಸ್ಟ್ ಹಾಕಿಕೊಂಡಿದ್ದನು. “I Stand With Pakistan Army” (ನಾನು ಪಾಕಿಸ್ತಾನದ ಸೇನೆನೊಂದಿಗೆ ನಿಲ್ಲುತ್ತೇನೆ) ಎಂದು ಬರೆದುಕೊಂಡಿದ್ದು, ಅವನ ಮತ್ತು ಸೇನೆಯ ಫೋಟೋ ಹಾಕಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದನು.
ಬುರಾನ್ ಮಾಡಿದ ಪೋಸ್ಟ್ ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ‘ಇಂಡಿಯನ್ ಆರ್ಮಿ’ ಎಂದು ಪೋಸ್ಟನ್ನು ಬದಲಾಯಿಸಿಕೊಂಡಿದ್ದನು. ಆದರೆ ಬುರಾನ್ ಪೋಸ್ಟ್ ವೈರಲ್ ಆದ ಬಳಿಕ ಶಹಾಪುರದ ಭೀಮರಾಯನಗುಡಿ ಪೊಲೀಸರು ದೇಶದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv