ಮಂಡ್ಯ: ಪಾಕಿಸ್ತಾನ ತನ್ನ ವಶದಲ್ಲಿರಿಸಿಕೊಂಡಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸತಾಯಿಸಿ ಸತಾಯಿಸಿ ಕೊನೆಗೂ ಶುಕ್ರವಾರ ರಾತ್ರಿ ಭಾರತಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅಭಿನಂದನ್ ಭಾರತಕ್ಕೆ ಮರಳಿದ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ತವರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಗುರು ಪತ್ನಿ ಕಲಾವತಿ, ಸಹೋದರರಾದ ಆನಂದ್, ಮಧು ಸೇರಿದಂತೆ ನೂರಾರು ಜನರು ಒಟ್ಟಾಗಿ ಭಾಗಿಯಾಗಿ ಅಭಿನಂದನ್ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಅಭಿನಂದನ್ ಭಾವ ಚಿತ್ರ ಹಿಡಿದು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ `ಟೈಗರ್ ಅಭಿನಂದನ್ ಸರ್’ ಎಂದು ಜೈಕಾರ ಹಾಕಿದ್ದಾರೆ.
ಅಭಿನಂದನ್ ವಾಪಸ್ ಬಂದಿದ್ದಕ್ಕೆ ಖುಷಿ ಇದೆ. ನಮ್ಮ ಸೇನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೇನೆಗೆ ಒಳಿತಾಗಲಿ, ಅವರಿಗೆ ಶಕ್ತಿ, ಧೈರ್ಯ ಕೊಟ್ಟು ಕಾಪಾಡಲಿ. ಪಾಕಿಸ್ತಾನದವರನ್ನು ಒಬ್ಬರನ್ನು ಉಳಿಸಬಾರದು ಎಂದು ಟೈಗರ್ ಅಭಿನಂದನ್ ಅವರಿಗೆ ಕಲಾವತಿ ಸೆಲ್ಯೂಟ್ ಮಾಡಿದ್ದಾರೆ.
ಭಾರತದ ಕೆಚ್ಚೆದೆಯ ವೀರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ 60 ಗಂಟೆಗಳ ಬಳಿಕ ತಾಯ್ನಾಡಿಗೆ ಸುರಕ್ಷಿತರಾಗಿ ವಾಪಸ್ ಆಗಿದ್ದಾರೆ. ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.
https://www.youtube.com/watch?v=ArvRnqPs81s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv