ಭಾರತದಿಂದ ಪರಿಸರ ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ದೂರು ನೀಡಲಿದೆ ಪಾಕ್

Public TV
1 Min Read
balakot main

ಇಸ್ಲಾಮಾಬಾದ್: ಭಾರತ ನಮ್ಮ ನೆಲದಲ್ಲಿ ಪರಿಸರ ಭಯೋತ್ಪಾದನೆ ಮಾಡಿದೆ. ಭಾರತದ ಯುದ್ಧ ವಿಮಾನಗಳು ಬಾಂಬ್ ಎಸೆದು ಅರಣ್ಯ ಪರಿಸರವನ್ನು ಹಾಳು ಮಾಡಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ನೀಡಲು ಪಾಕಿಸ್ತಾನ ಮುಂದಾಗಿದೆ.

ಭಾರತದ ಯುದ್ಧ ವಿಮಾನಗಳು ಅಕ್ರಮವಾಗಿ ನಮ್ಮ ವಾಯುನೆಲೆಯನ್ನು ಬಳಸಿಕೊಂಡು ಬಾಂಬ್ ದಾಳಿ ಮಾಡಿವೆ. ಇದರಿಂದ 15 ಪೈನ್ ಮರಗಳು ನಾಶವಾಗಿದೆ ಎಂದು ಪಾಕಿಸ್ತಾನದ ಆರೋಪಿಸಿದೆ.

ಹವಾಮಾನ ಬದಲಾವಣೆ ಖಾತೆಯ ಸಚಿವ ಮಲಿಕ್ ಅಮಿನ್ ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಅರಣ್ಯದಲ್ಲಿ ಬಾಂಬ್ ಹಾಕಿದ್ದಾರೆ. ಸರ್ಕಾರ ಈ ಬಾಂಬ್ ದಾಳಿಯಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಿದೆ. ಅಧ್ಯಯನದಿಂದ ಬಂದ ಫಲಿತಾಂಶವನ್ನು ಇಟ್ಟುಕೊಂಡು ವಿಶ್ವಸಂಸ್ಥೆ ಮತ್ತು ಇತರ ಒಕ್ಕೂಟಗಳಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಬಾಲಕೋಟ್ ನಲ್ಲಿ ಜೈಷ್ ಉಗ್ರಗಾಮಿಗಳ ನೆಲೆ ಇಲ್ಲ. ಅರಣ್ಯ ಪ್ರದೇಶದ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನ ಹತ್ಯೆ ಮಾಡಿದೆ ಎಂದು ಭಾರತ ಸುಳ್ಳು ಹೇಳುತ್ತಿದೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Share This Article
Leave a Comment

Leave a Reply

Your email address will not be published. Required fields are marked *