ಕೇಂದ್ರ ಸರ್ಕಾರದ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿಗೆ ಮಾನ್ವಿ ಸಿಪಿಐ ಆಯ್ಕೆ

Public TV
1 Min Read
rcr best police 1

ರಾಯಚೂರು: ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕೊಡುವ 2018ನೇ ಸಾಲಿನ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿಗೆ ಜಿಲ್ಲೆಯ ಮಾನ್ವಿ ಸಿಪಿಐ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

ದೇಶದ ಒಟ್ಟು 101 ಜನ ಪೊಲೀಸ್ ಅಧಿಕಾರಿಗಳನ್ನು 2018ನೇ ಸಾಲಿನ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಿಪಿಐ ಚಂದ್ರಶೇಖರ ಸೇರಿದಂತೆ ಒಟ್ಟು ಆರು ಜನ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಪದಕಕ್ಕೆ ಭಾಜನರಾಗಿದ್ದಾರೆ.

Ministry of Home Affairs

ರಾಜ್ಯದ ಎಸ್.ಪಿ. ಚನ್ನಬಸವಮ್ಮ.ಎಸ್.ಲಂಗೋಟಿ, ಡಿವೈಎಸ್ಪಿ ಬಿ.ಬಾಲರಾಜು, ಡಿವೈಎಸ್ಪಿ ಎಂ.ಡಿ.ಶರತ್, ಸಿಪಿಐ ಬಿ.ರಾಮಚಂದ್ರ, ಸಿಪಿಐ ಎಲ್.ವೈ.ರಾಜೇಶ್ ಹಾಗೂ ಸಿಪಿಐ ಚಂದ್ರಶೇಖರ್ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು 2018ರಲ್ಲಿ ತನಿಖಾಧಿಕಾರಿಗಳು ಕೈಗೆತ್ತಿಕೊಂಡ ಪ್ರಕರಣಗಳಲ್ಲಿ ಎಷ್ಟು ಕೇಸ್‍ಗಳನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ ಎನ್ನುವ ಆಧಾರದ ಮೇಲೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಮಾತ್ರ ಕೇಂದ್ರದಿಂದ ಪ್ರಕಟಿಸಲಾಗಿದ್ದು, ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *