ಭಾರತೀಯ ಯೋಧರ ಪರ ರ‍್ಯಾಲಿಯಲ್ಲಿ ಶಾಸಕ ಸುಧಾಕರ್‌ಗೆ ಅವಮಾನ..!

Public TV
1 Min Read
SUDHAKAR

ಚಿಕ್ಕಬಳ್ಳಾಪುರ: ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಅವರನ್ನು ಸುತ್ತುವರಿದು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಸುಧಾಕರ್ ಅವರಿಗೆ ಅವಮಾನ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಹಳೇ ಎಸ್ಪಿ ಕಚೇರಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಯೋಧರ ಪರ ನಾಗರೀಕರು ರ‍್ಯಾಲಿ ಕೈಗೊಂಡಿದ್ದರು. ಪಕ್ಷಾತೀತವಾಗಿ ಹಲವು ಮಂದಿ ನಾಗರೀಕರು ಭಾರತೀಯ ಯೋಧರ ಪರ ಮೆರವಣಿಗೆ ನಡೆಸಿದ್ದರು. ಮೆರವಣಿಗೆ ವೇಳೆ ಕಾರಿನಲ್ಲಿ ಶಾಸಕ ಸುಧಾಕರ್ ಅದೇ ಮಾರ್ಗವಾಗಿ ಹಾದು ಹೋಗುತ್ತಿದ್ದರು.

vlcsnap 2019 02 28 08h51m45s560

ಈ ವೇಳೆ ಶಾಸಕ ಸುಧಾಕರ್ ಬಳಿ ನಾಗರಿಕರೊಬ್ಬರು ಬಂದು ರ‍್ಯಾಲಿಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ಸುಧಾಕರ್ ಅವರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕ ಸುಧಾಕರ್ ಅವರನ್ನು ಸುತ್ತುವರಿದು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ.

ಬಿಜೆಪಿ ಕಾರ್ಯಕರ್ತರ ಘೋಷಣೆಯಿಂದ ಕಸಿವಿಸಿಗೊಂಡ ಸುಧಾಕರ್ ರ‍್ಯಾಲಿಯಿಂದ ವಾಪಸ್ ಹೋಗಿದ್ದು, ಬಿಜೆಪಿ ಕಾರ್ಯಕರ್ತರ ವರ್ತನೆಗೆ ಶಾಸಕ ಸುಧಾಕರ್ ಅಸಮಾಧಾನಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *