ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ: ರಮ್ಯಾ ಪ್ರಶ್ನೆ

Public TV
2 Min Read
MND RAMYA MELEKOTE 5

ಬೆಂಗಳೂರು: ಬುಧವಾರ ಬೆಳಗ್ಗೆ ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಪ್ರಯತ್ನಿಸಿದ್ದು, ಪಾಕ್ ಯುದ್ಧ ವಿಮಾನಗಳನ್ನು ಹಿಂದಿಕ್ಕುವ ವೇಳೆ ಒಂದು ಮಿಗ್-21 ವಿಮಾನ ಪತನಗೊಂಡು ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಸೈನ್ಯದ ವಶದಲ್ಲಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.

ರಮ್ಯಾ ಟ್ವೀಟ್: ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂಬ ವಿಚಾರ ನಿಮಗೆ ಗೊತ್ತಿರಲಿಲ್ಲವೆ? ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ? ನಮ್ಮನ್ನು ಉದ್ದೇಶಿಸಿ ಮಾತನಾಡುವುದು ಬಿಟ್ಟು ಆ್ಯಪ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಪೈಲಟ್ ಬಗ್ಗೆ ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಅರುಣ್ ಜೇಟ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪುಲ್ವಾಮಾ ದಾಳಿ ಬಳಿಕ ದೇಶಾದ್ಯಂತ ಶೋಕಾಚರಣೆಯಲ್ಲಿ ಮುಳುಗಿತ್ತು. ಬಿಜೆಪಿ ಮಾತ್ರ ಪುಲ್ವಾಮಾ ಉಗ್ರರ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿತ್ತು. 2008ರಲ್ಲಿ ಉಗ್ರರ ದಾಳಿ ನಡೆದಾಗ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕೇಂದ್ರದತ್ತ ಬೊಟ್ಟು ಮಾಡಿದ್ದರು. ಇದೀಗ ಕಾಂಗ್ರೆಸ್ ಯೋಧ ಮತ್ತು ಸರ್ಕಾರದೊಂದಿಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮೋದಿತಯವರ ಕೆಲ ಹೇಳಿಕೆಗಳಳ್ಳು ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ದೆಹಲಿಯ ವಿಮಾನ ನಿಲ್ದಾಣದ ಬಳಿಕ ಮೆಟ್ರೊ ನಿಲ್ದಾಣಗಳಲ್ಲಿ ಈಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಡುವಂತೆ ಸೂಚಿಸಿಲಾಗಿದೆ. ದೆಹಲಿ ಮೆಟ್ರೊ ರೈಲ್ ಕಾರ್ಪೋರೇಷನ್ ಮುಖ್ಯಸ್ಥರ ಮೂಲಕ ಎಲ್ಲ ಮೆಟ್ರೊ ನಿಲ್ದಾಣಗಳಿಗೂ ಸಂದೇಶ ರವಾನೆಯಾಗಿದ್ದು ಭದ್ರತೆ ಹೆಚ್ಚಿಸುವಂತೆ ಭದ್ರತಾ ಏಜೆನ್ಸಿಗೆಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲ ಮೆಟ್ರೊ ನಿಲ್ದಾಣಗಳ ಮೇಲೆ ನಿಗಾ ಇಡಬೇಕು. ಪ್ರಯಾಣಿಕರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು. ಅನುಮಾನ ಬಂದಲ್ಲಿ ಅಂತವರನ್ನು ವಿಚಾರಣೆ ಕೂಡಾ ನಡೆಸಬಹುದು ಎಂದು ಆದೇಶಿಸಲಾಗಿದೆ. ಪ್ರತಿ 2 ಗಂಟೆಗೊಮ್ಮೆ ಮುಖ್ಯ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *