ನವದೆಹಲಿ: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ವಾಯುಪಡೆ ನಡೆಸಿದ ಪ್ರತಿದಾಳಿಗೆ ಸುಮಾರು 50 ಮಂದಿ ಪಾಕ್ ಉಗ್ರರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.
ಭಾರತದ ವಾಯುಸೇನೆ ಬೆಳಗ್ಗೆ ನಡೆಸಿದ ದಾಳಿ ವೇಳೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿತ್ತು. ಆದರೆ ಸಂಜೆಯ ವೇಳೆ ಸಾವು ನೋವು ಸಂಭವಿಸಿದೆ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
ಭಾರತೀಯ ವಾಯು ಪಡೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ದಾಳಿ ನಡೆಸಿ, ಪಾಕಿಸ್ತಾನದಲ್ಲಿ ಅಡಗಿ ಕುಳಿತ್ತಿದ್ದ ಸುಮಾರು 15 ಉಗ್ರರ ಅಡಗುತಾಣಗಳನ್ನು ಒಳಗೊಂಡ 6 ಪ್ರದೇಶವನ್ನು ಟಾರ್ಗೆಟ್ ಮಾಡಿ ವಾಯುಪಡೆ ದಾಳಿ ನಡೆಸಿದೆ. ಸದ್ಯ ಈ ದಾಳಿಯಲ್ಲಿ ಸುಮಾರು 50 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆಯ ಮೂಲಗಳನ್ನು ಆಧಾರಿಸಿ ನ್ಯೂಸ್ 18 ವರದಿ ಮಾಡಿದೆ. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು
ಪ್ರಮುಖವಾಗಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ತರಬೇತಿ ಕ್ಯಾಂಪ್‍ಗಳ ಮೇಲೆಯೇ ದಾಳಿ ನಡೆದಿದೆ ಎನ್ನುವುದನ್ನು ಪಾಕ್ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿ ಸುದ್ದಿ ಪ್ರಸಾರ ಮಾಡಿದೆ.
ಭಾರತದ ಗೃಹ ಇಲಾಖೆಯ ಮೂಲಗಳು ಸುಮಾರು 350ಕ್ಕೂ ಹೆಚ್ಚು ಉಗ್ರರು ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿತ್ತು. ಎಷ್ಟು ಜನ ಉಗ್ರರು ಹತ್ಯೆಯಾಗಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ಪಾಕ್ ತಿಳಿಸುವುದಿಲ್ಲ. ತಿಳಿಸಿದರೆ ಉಗ್ರರು ಪಾಕಿಸ್ಥಾನದಲ್ಲೇ ನೆಲೆಸಿದ್ದಾರೆ ಎನ್ನುವುದನ್ನು ಒಪ್ಪಿಕೊಂಡ ಹಾಗೆ ಆಗುತ್ತದೆ. ಆದರೆ ಬಾಂಬ್ ದಾಳಿ ನಡೆದು ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ಬಾಲಕೋಟ್ ನಿವಾಸಿಗಳೇ ಹೇಳುವ ಮೂಲಕ ಪಾಕ್ ಸುಳ್ಳನ್ನು ಬಯಲು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv