ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

Public TV
1 Min Read
HANUMANTHY

ಬೆಂಗಳೂರು: ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ರನ್ನರ್ ಅಪ್ ಆಗಿ ಜನಪದ ಹಕ್ಕಿ ಹನುಮಂತ ಹೊರಹೊಮ್ಮಿದ್ದಾರೆ. ಆದರೆ ಹಾವೇರಿಯ ಕುರಿಗಾಯಿ ಹನುಮಂತ ಎಂತಲೇ ಕರ್ನಾಟಕದಾದ್ಯಂತ ಖ್ಯಾತಿ ಪಡೆದು, ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರನ್ನರ್ ಅಪ್ ಹನುಮಂತ, ದೇವರ ದಯೆಯಿಂದ ಇಲ್ಲಿಗೆ ಬಂದು ಹಾಡಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ನಾನು ಸರಿಗಮಪ ವೇದಿಕೆ ಹತ್ತುತ್ತೀನಿ ಎಂಬ ವಿಶ್ವಾಸ ಕೂಡ ಇರಲಿಲ್ಲ. ಇನ್ನೂ ಫೈನಲ್‍ವರೆಗೂ ತಲುಪುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

vlcsnap 2019 02 24 08h35m56s472

ಅಪ್ಪ-ಅಮ್ಮ ಕೂಡ ಇದೇ ಸಾಕು, ಸಂತೋಷವಾಗಿದೆ ಎಂದು ಹೇಳಿದ್ದಾರೆ. ನಾನು ಎಲ್ಲೇ ಇದ್ದರು ಸಂಗೀತ ಕಲಿಯಬೇಕು ಎಂದುಕೊಂಡಿದ್ದೇನೆ. ಅದನ್ನೇ ಮುಂದುವರಿಸುತ್ತೇನೆ. ಸಂಗೀತ ನಾದಬ್ರಹ್ಮ ಹಂಸಲೇಖ ಅವರು ಇಬ್ಬರ ಕೈಯನ್ನು ಹಿಡಿದುಕೊಂಡಿದ್ದಾಗ ಇಬ್ಬರಲ್ಲಿ ಯಾರು ಗೆದ್ದರು ಖುಷಿಯಾಗುತ್ತಿತ್ತು ಎಂದರು.

ನಾನು ಕೂಡ ಕೀರ್ತನ್ ಹೊಳ್ಳ ಅವರೇ ಗೆಲ್ಲಬೇಕು ಅಂದುಕೊಂಡಿದ್ದೆ. ಅವರೆ ಗೆದ್ದರು, ತುಂಬಾ ತುಂಬಾ ಖುಷಿಯಾಗುತ್ತಿದೆ. ಸಂತೋಷವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹನುಮಂತ ಕುಣಿದು ಕುಪ್ಪಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *