ಹುಬ್ಬಳ್ಳಿ: ಜ್ಯೂನಿಯರ್ ವಿಷ್ಣುವರ್ಧನ್ ಎಂ.ಡಿ ಅಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಡಿ ಅಲಿ, ಸುಮಾರು 35 ವರ್ಷಗಳಿಂದ ಖ್ಯಾತ ನಟರಾದ ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ರಜನಿಕಾಂತ್ ಸೇರಿದಂತೆ ಹಲವು ನಾಯಕ ನಟರೊಂದಿಗೆ ನಟಿಸಿದ್ದೇನೆ. ನಾನು 10ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿದ್ದೇನೆ. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು ಇತರೇ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದೇನೆ ಎಂದು ತಿಳಿಸಿದರು.
ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಚಿಕಿತ್ಸೆಗೆ ಬೇಕಾಗುವಷ್ಟು ಹಣವಿಲ್ಲದೆ ಪರದಾಡುವಂತಾಗಿದೆ. ಆದರಿಂದ ಹುಬ್ಬಳ್ಳಿಯಲ್ಲಿ ಫೆಬ್ರವರಿ 26 ರಂದು ನಾನು ಕೆಲ ಜ್ಯೂನಿಯರ್ ನಟರೊಂದಿಗೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದೆನೆ. ಆ ಕಾರ್ಯಕ್ರಮದಿಂದ ಬಂದ ಹಣದಿಂದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದು ತಮ್ಮ ಪರಿಸ್ಥತಿಯನ್ನು ಹೇಳಿಕೊಂಡಿದ್ದಾರೆ.
ಎಂ.ಡಿ ಅಲಿ ಅವರೊಂದಿಗೆ ವೇದಿಕೆ ಮೇಲಿದ್ದವರು ಅವರಿಗೆ ಸಹಾಯಹಸ್ತ ನೀಡಿದ್ದಾರೆ. ಬಳಿಕ ನಮ್ಮ ಕೈಲಾದ ಮಟ್ಟಿಗೆ ಅವರಿಗೆ ಸಹಾಯ ಮಾಡಲು ನಾವು ಸಿದ್ಧ. ಯಾಕೆಂದರೆ ನಾವು ಕಲಾವಿದರನ್ನು ಗೌರವಿಸುತ್ತೇವೆ. ಅವರ ಕಲೆಗೆ ಬೆಲೆ ನೀಡುತ್ತೇವೆ. ಅಂದುಕೊಂಡ ಮಟ್ಟಿಗೆ ಅಲಿ ಅವರಿಗೆ ಸಹಾಯ ಮಾಡಲು ಆಗಲಿಲ್ಲ ಆದರೂ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv