ಬೆಂಗಳೂರು: ಇಂದಿನ ಏರ್ ಶೋನಲ್ಲಿ ಮಹಿಳೆಯರು ಹವಾ ಸೃಷ್ಟಿಸಲಿದ್ದಾರೆ. ಲೋಹದ ಹಕ್ಕಿಗಳನ್ನು ಮಹಿಳಾ ಪೈಲೆಟ್ ಗಳು ಚಲಾಯಿಸುತ್ತಿದ್ದಾರೆ.
ಮಾರ್ಚ್ 8ರ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿನ ಏರ್ ಇಂಡಿಯಾ ಶೋದಲ್ಲಿ ಮಹಿಳಾ ಪೈಲಟ್‍ಗಳೇ ಆಗಸದಲ್ಲಿ ಕಸರತ್ತು ಮಾಡಿ ಪವರ್ ತೋರಿಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ 6 ಜನ ಮಹಿಳೆಯರು ಪ್ಯಾರಾಜೂಪರ್ಸ್ ಪ್ರದರ್ಶನ ನೀಡಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ತೇಜಸ್ ವಿಮಾನದಲ್ಲಿ ಹಾರಾಡಲಿದ್ದಾರೆ. ಇಂದು ಮತ್ತು ನಾಳೆ ಮಾತ್ರ ಏರ್ ಶೋ ನಡೆಯಲಿದೆ. ಹಾಗಾಗಿ ಈ 2 ದಿನ ಜನಸಾಗರವೇ ಹರಿದುಬರಲಿದೆ. ಇದರಿಂದ ಟ್ರಾಫಿಕ್ ಬಿಸಿಯೂ ತಟ್ಟಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv