ಸ್ನೇಹಿತನ ಕೊಲೆಗೈದು ರಕ್ತದ ಕಲೆಗಳು ಬಿದ್ದಿದ್ದ ಫ್ಲೆಕ್ಸ್ ಸುಟ್ಟ..!

Public TV
1 Min Read
RCR MURDER V

                                  ಮೊಹಮದ್ ಶಫಿ                                                 ಮುನೀರ್   

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸ್ನೇಹಿತನನ್ನೆ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೋಶಾಲಾ ರಸ್ತೆಯ ಸ್ವಾಗತ್ ಗಾರ್ಡನ್ ಫಂಕ್ಷನ್ ಹಾಲ್ ಬಳಿ ನಡೆದಿದೆ.

32 ವರ್ಷದ ಮುನೀರ್ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ. ಮೊಹಮದ್ ಶಫಿ ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ತನ್ನ ಗೆಳೆಯನನ್ನು ಕೊಂದು ಬಳಿಕ ರಕ್ತದ ಕಲೆಯಾಗಿದ್ದ ಫ್ಲೆಕ್ಸನ್ನು ಸುಟ್ಟು ಹಾಕಿದ್ದಾನೆ.

RCR MURDER AVB 2

ಮೃತ ಮುನೀರ್ ಮತ್ತು ಆರೋಪಿ ಮೊಹಮದ್ ಶಫಿ ಇಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಒಟ್ಟಿಗೆ ಒಂದೆಡೆ ಸೇರಿ ಮದ್ಯಪಾನ ಮಾಡಿದ್ದಾರೆ. ಬಳಿಕ ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಮುನೀರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ರಕ್ತದ ಕಲೆಗಳು ಬಿದ್ದಿದ್ದ ಫ್ಲೇಕ್ಸ್ ನ್ನ ಮೊಹಮದ್ ಶಫಿ ಸುಟ್ಟುಹಾಕಿದ್ದಾನೆ.

ಈ ಪ್ರಕರಣ ಸಂಬಂಧ ಸದರಬಜಾರ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮೊಹಮದ್ ಶಫಿಯನ್ನ ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಬಳಸಲಾದ ಚಾಕುವನ್ನ ಜಪ್ತಿ ಮಾಡಿದ್ದು, ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *