ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿದ್ದು, ಶುಕ್ರವಾರ ಅವರ ಹಿರಿಯ ಮಗಳ ನಿಶ್ಚಿತಾರ್ಥ ಜರುಗಲಿದೆ.
ರವಿಚಂದ್ರನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ಹೆಣ್ಣು ಮಗಳು ಇದ್ದಾರೆ. ಈಗ ಅವರ ಹಿರಿಯ ಮಗಳು ಗೀತಾಂಜಲಿ ಅವರು ಉದ್ಯಮಿ ಅಜಯ್ ಅವರನ್ನು ಕೈ ಹಿಡಿಯಲು ಸಿದ್ಧರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಶಾಸ್ತ್ರೋಕ್ತವಾಗಿ ಈ ನಿಶ್ಚಿತಾರ್ಥ ನಡೆಯಲಿದೆ. ಗೀತಾಂಜಲಿ ಅವರು ನಿಶ್ಚಿತಾರ್ಥವಾಗುವ ಉದ್ಯಮಿ ಅಜಯ್ ಅವರ ಫೋಟೋ ಇನ್ನೂ ಬಹಿರಂಗವಾಗಿಲ್ಲ. ಹಾಗಾಗಿ ಅವರು ಯಾರು ಎಂಬ ಕೂತುಹಲ ಎಲ್ಲರಿಗೂ ಮೂಡಿದೆ.
ಖಾಸಗಿಯಾಗಿ ನಡೆಯುವ ನಿಶ್ಚಿತಾರ್ಥಕ್ಕೆ ಕುಟುಂಬ ಮತ್ತು ಚಿತ್ರರಂಗದ ಕೆಲವೇ ಕೆಲವು ಅತಿಥಿಗಳನ್ನು ಆಹ್ವಾನಿಸಲಾಗಿದೆ. ಗೀತಾಂಜಲಿ ಹಾಗೂ ಅಜಯ್ ಅವರ ಮದುವೆ ದಿನಾಂಕ ಹಾಗೂ ಸ್ಥಳ ಇನ್ನೂ ನಿಗದಿಯಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv