ಸಿಕ್ಸರ್‌ಗಳ ಸುರಿಮಳೆ: ಇಂಗ್ಲೆಂಡ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿಶ್ವದಾಖಲೆ

Public TV
2 Min Read
west indies

ಬ್ರಿಡ್ಜ್ ಟೌನ್: ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 23 ಸಿಕ್ಸರ್ ಸಿಡಿಸಿ ವೆಸ್ಟ್ ಇಂಡೀಸ್ ಆಟಗಾರರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ತಂಡ ಎಂಬ ಹೆಗ್ಗಳಿಕೆಯನ್ನು ವೆಸ್ಟ್ ಇಂಡೀಸ್ ಪಡೆದುಕೊಂಡಿದೆ.

2014 ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧವೇ ನ್ಯೂಜಿಲೆಂಡ್ ತಂಡ 22 ಸಿಕ್ಸರ್ ಸಿಡಿಸಿದ್ದು ಇದೂವರೆಗಿನ ದಾಖಲೆ ಆಗಿತ್ತು. ಈ ಪಂದ್ಯ ಸೇರಿದಂತೆ ನಾಲ್ಕನೇ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ 20ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆಯನ್ನು ವೆಸ್ಟ್ ಇಂಡೀಸ್ ತಂಡ ನಿರ್ಮಿಸಿದೆ.

chris gayle 2

ವೆಸ್ಟ್ ಇಂಡೀಸ್ ಪರ ಸ್ಫೋಟಕ ಆಟಗಾರ ಕ್ರಿಸ್ ಗೇಲ್ 12 ಸಿಕ್ಸರ್ ಸಿಡಿಸಿದರೆ, ಬ್ರಾವೋ 4, ಆಶ್ಲೇ ನರ್ಸ್ 3 ಹಾಗೂ ಜಾನ್ ಕ್ಯಾಂಪ್ಬೆಲ್, ಹೋಪ್, ಹೇಟ್ಮರ್, ಬಿಶೋ ತಲಾ 1 ಸಿಕ್ಸರ್ ಸಿಡಿಸಿದ್ದರು. ಇದನ್ನು ಓದಿ: ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

ಕ್ರಿಸ್ ಗೇಲ್ ಉತ್ತಮ ಆಟದಿಂದಾಗಿ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೂ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡಿ 6 ವಿಕೆಟ್ ಗಳ ಜಯವನ್ನು ಗಳಿಸಿದೆ. ಆರಂಭಿಕ ಆಟಗಾರ ಜೇಸನ್ ರೇ 123 ರನ್(85 ಎಸೆತ, 15 ಬೌಂಡರಿ, 3 ಸಿಕ್ಸ್), ಜೋ ರೂಟ್ 102 ರನ್(97 ಎಸೆತ, 9 ಬೌಂಡರಿ) ಸಿಡಿಸಿದ ಪರಿಣಾಮ ಇಂಗ್ಲೆಂಡ್ 48.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿ ಗುರಿಮುಟ್ಟಿತು. ಸ್ಫೋಟಕ ಶತಕ ಸಿಡಿಸಿದ ಜೇಸನ್ ರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

chris gayle

ಗೇಲ್ ನಿವೃತ್ತಿ: 2019ರ ವಿಶ್ವಕಪ್ ಬಳಿಕ ಗೇಲ್ ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಹೇಳಲಿದ್ದಾರೆ. ಕಳೆದ ವಿಶ್ವಕಪ್ ಬಳಿಕ ಗೇಲ್ ಇದುವರೆಗೂ ಕೇವಲ 15 ಏಕದಿನ ಪಂದ್ಯಗಳನ್ನು ಆಡಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಗೆ ಮತ್ತೆ ಆಯ್ಕೆ ಆಗಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಗೇಲ್ ವಿಶ್ವಕಪ್ ಬಳಿಕ ನಿವೃತ್ತಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *