ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

Public TV
1 Min Read
IMRAN KHAN

ಇಸ್ಲಾಮಾಬಾದ್: ಮುಂಬೈ ದಾಳಿ ಬಳಿಕ ಸಾಕಷ್ಟು ಸಾಕ್ಷ್ಯ ನೀಡಿದ್ರೂ ಇನ್ನೂ ದೇಶದಲ್ಲಿನ ಉಗ್ರರನ್ನು ಮಟ್ಟ ಹಾಕದ ಪಾಕಿಸ್ತಾನ ಈಗ ಪುಲ್ವಾಮಾ ದಾಳಿ ಬಗ್ಗೆ ಸಾಕ್ಷ್ಯವನ್ನು ಕೇಳುವ ಮೂಲಕ ಮತ್ತೆ ಭಾರತೀಯರನ್ನು ಕೆಣಕಿದೆ.

ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದರೆ ನಮಗೆ ಸಾಕ್ಷಿ ನೀಡಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದಲ್ಲಿ ಕೇಳಿಕೊಂಡಿದ್ದಾರೆ.

ಘಟನೆಯ ನಂತರ ಇದೇ ಮೊದಲ ಬಾರಿಗೆ ದೀರ್ಘವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕೃತ್ಯದಲ್ಲಿ ಪಾಕಿಸ್ತಾನ ಕೈವಾಡ ಇದೆ ಎನ್ನುವುದಕ್ಕೆ ಭಾರತ ಸಾಕ್ಷ್ಯ ನೀಡಿದರೆ ನಾನು ಕ್ರಮ ಕೈಗೊಂಡು ತನಿಖೆಗೆ ಆದೇಶ ನೀಡುತ್ತೇನೆ ಎಂದು ಹೇಳಿದ್ದಾರೆ.

imran khan

ನಾವು ಸಹ ಉಗ್ರರಿಂದ ಸಂತ್ರಸ್ತರಾಗಿದ್ದೇವೆ. ಯಾರೂ ಹಿಂಸೆಗೆ ಪ್ರಚೋದನೆ ನೀಡುತ್ತಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಆದರೆ ದಾಳಿಯ ಬಗ್ಗೆ ನಮಗೆ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ. ಅಂತಹ ದಾಳಿಯನ್ನು ನಾವು ಯಾಕೆ ಮಾಡಿಸುತ್ತೇವೆ ಪ್ರಶ್ನಿಸಿದ್ದಾರೆ.

ಮಾತುಕತೆಯ ಮೂಲವೇ ಇಂತಹ ಸಮಸ್ಯೆಗಳನ್ನು ವಶಕ್ಕೆ ಪಡೆಯಬೇಕು ಎಂದು ಅಭಿಪ್ರಾಯ ಪಟ್ಟ ಇಮ್ರಾನ್ ಖಾನ್, ಯುದ್ಧವನ್ನು ಪ್ರಾರಂಭಿಸುವುದು ಮಾನವರ ಕೈಯಲ್ಲಿದೆ, ಇದು ಎಲ್ಲಿಯವರೆಗೂ ಕೊಂಡ್ಯೊಯುತ್ತದೆ ಎಂಬುವುದು ಆ ದೇವರಿಗೆ ಮಾತ್ರಗೊತ್ತು. ಆದರೆ ಈ ಸಮಯದಲ್ಲಿ ಭಾರತ ಸರ್ಕಾರ ಕಾಶ್ಮೀರಿ ಜನರನ್ನು ಪ್ರಶ್ನಿಸಬೇಕಿದ್ದು, ಹಿಂಸೆಯಲ್ಲಿ ಏಕೆ ಭಾಗವಹಿಸುತ್ತಿದ್ದಾರೆ ಎಂಬುವುದು ತಿಳಿಯಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಮುಂದಿನ ದಿನಗಳು ಚುನಾವಣೆಯ ವರ್ಷ ಎಂಬುದು ನನಗೆ ತಿಳಿದಿದೆ. ಭಾರತ ಸರ್ಕಾರ ಒಂದೊಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಕೂಡ ಸುಮ್ಮನೆ ಕೂರುವುದಿಲ್ಲ. ಪ್ರತಿದಾಳಿ ನಡೆಸಲು ನಮಗೆ ಬರುತ್ತದೆ. ಆದರೆ ಈ ವಿಚಾರ ಮಾತುಕತೆಯಲ್ಲಿ ಬಗೆ ಹರಿಸಿಕೊಳ್ಳಬಹುದು ಎಂದು ಹೇಳಿದರು.

Capture 11

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *