ಸೈನಿಕರು ಕಾಶ್ಮೀರಕ್ಕೆ ತೆರಳೋದೇ ಸಾಯೋದಕ್ಕೆ: ಕಮಲ್ ಹಾಸನ್

Public TV
1 Min Read
Kamal Haasan

– ಕಾಶ್ಮೀರವನ್ನು ಅಜಾದ್ ಕಾಶ್ಮೀರ ಎಂದು ಘೋಷಿಸಿ
– ವಿವಾದಾತ್ಮಕ ಹೇಳಿಕೆ ವಿರುದ್ಧ ಭಾರೀ ಆಕ್ರೋಶ

ಚೆನ್ನೈ: ಸೈನಿಕರು ಕಾಶ್ಮೀರಕ್ಕೆ ತೆರಳೋದೇ ಸಾಯುವುದಕ್ಕೆ ಎಂದು ಬಹುಭಾಷಾ ನಟ, ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶವನ್ನು ಆಜಾದ್ ಕಾಶ್ಮೀರ್ ಎಂದು ಪರಿಗಣಿಸಿ. ಕಣಿವೆ ನಾಡಿನಲ್ಲಿ ಜನಮತ ಗಣನೆಗೆ ಕೇಂದ್ರ ಸರ್ಕಾರ ಹೆದರುತ್ತಿರೋದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಜನಮತಕ್ಕೆ ಅನುಗುಣವಾಗಿ ಕಾಶ್ಮೀರ ಪ್ರದೇಶದ ವಿವಾದ ಇತ್ಯರ್ಥವಾಗಬೇಕು ಎನ್ನುವ ಹಳೇಯ ಹೇಳಿಕೆಯನ್ನು ಪುನಾರುಚ್ಚರಿಸಿದ್ದಾರೆ.

ಜಗತ್ತು ಬದಲಾಗಿದೆ. ನಮ್ಮ ಸೈನ್ಯ ಇನ್ನೂ ಯಾಕೆ ಬದಲಾಗುತ್ತಿಲ್ಲ. ಲೈನ್ ಆಫ್ ಕಂಟ್ರೋಲ್‍ನಲ್ಲಿ ಇದ್ದರೆ ಒಬ್ಬ ಸೈನಿಕ ಕೂಡ ಹುತಾತ್ಮರಾಗುವುದಿಲ್ಲ. ಸೈನ್ಯವನ್ನು ಗಡಿ ರೇಖೆ ದಾಟಿ ಮುಂದೆ ಹೋಗುವಂತೆ ಮಾಡುವುದು ಸರಿಯಲ್ಲ. ಈ ಮಾತನ್ನು 70 ವರ್ಷಗಳ ಹಿಂದೆಯೇ ಪತ್ರಿಕೆಯಲ್ಲಿ ಹೇಳಲಾಗಿದೆ. ಅದನ್ನು ನಾನು ಈಗ ನೆನಪಿಸುತ್ತಿರುವೆ. ಹಳೇ ಪದ್ಧತಿಯನ್ನೇ ಸೈನ್ಯ ಮುಂದುವರಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಡೀ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ನಮ್ಮ ಸಶಸ್ತ್ರ ಪಡೆಗಳು, ಪ್ಯಾರಾ-ಮಿಲಿಟರಿ ಮತ್ತು ಕೇಂದ್ರ ಪೊಲೀಸ್ ಪಡೆಗಳಿಂದ ನಾವು ನಿಸ್ವಾರ್ಥವಾಗಿ ರಕ್ಷಿಸಿಕೊಳ್ಳುತ್ತೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

KAMAL HAASAN

ಭಾರತ ಉಳಿದ ಎಲ್ಲ ರಾಷ್ಟ್ರಗಳಿಗಿಂತ ಅತ್ಯುತ್ತಮವೆಂದು ತರಿಸಬೇಕಿದೆ ಎನ್ನುವ ಮೂಲಕ ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಕೈಬಿಡುವಂತೆ ಕಮಲ್ ಹಾಸನ್ ಪರೋಕ್ಷವಾಗಿ ಹೇಳಿದ್ದಾರೆ. ಅವರ ಹೇಳಿಕೆಯಿಂದಾಗಿ ದೇಶ ವ್ಯಾಪಿ ಖಂಡನೆ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *