ನವದೆಹಲಿ: ಪುಲ್ವಾಮಾದ ಈ ಹೇಯ ಕೃತ್ಯದ ಹಿಂದೆ ಮಗ್ಗಲ ಮುಳ್ಳು ಪಾಕಿಸ್ತಾನದ ಕೈವಾಡ ಇದ್ದು ಈ ಬಾರಿ ಸರಿಯಾದ ಪಾಠವನ್ನೇ ಕೇಂದ್ರ ಸರ್ಕಾರ ಕಲಿಸುತ್ತಿದೆ.
ಪಾಕ್ ವಿರುದ್ಧ ರಾಜತಾಂತ್ರಿಕ ಅಸ್ತ್ರ ಪ್ರಯೋಗಿಸಿರುವ ಭಾರತ, 20 ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿತು. ಇದಕ್ಕೂ ಮುನ್ನ, ಬೆಳಗ್ಗೆ ಸಭೆ ನಡೆಸಿ ಪಾಕಿಸ್ತಾನಕ್ಕೆ ಕೊಟ್ಟಿದ್ದ ಅತ್ಯಾಪ್ತ ದೇಶ ಅನ್ನುವ ಸ್ಥಾನಮಾನವನ್ನು ತತ್ ಕ್ಷಣದಿಂದಲೇ ಹಿಂಪಡೆದಿದೆ. ಭಯೋತ್ಪಾದಕ ಸಂಘಟನೆ ಜೈಷ್-ಇ-ಮೊಹ್ಮದ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳಿ. ಉಗ್ರ ಸಂಘಟನೆಗಳಿಗೆ ಎಲ್ಲಾ ರೀತಿಯ ನೆರವನ್ನು ನಿಲ್ಲಿಸಿ ಅಂತ ಕೇಂದ್ರ ಸಚಿವ ಅರುಣ್ ಜೇಟ್ಲಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Arun Jaitley: The 'most favoured nation' status which was granted to Pakistan, stands withdrawn https://t.co/OKHXS69Ukq
— ANI (@ANI) February 15, 2019
ದುರ್ಘಟನೆ ಖಂಡನೀಯ. ಆದರೆ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಗುರುವಾರ ಪಾಕ್ ವಿದೇಶಾಂಗ ಸಚಿವಾಲಯ ಕೊಟ್ಟ ಹೇಳಿಕೆಯನ್ನು ನಾವು ಒಪ್ಪಲ್ಲ ಎಮದು ಪಾಕಿಸ್ತಾನದ ಹೈ-ಕಮೀಷನರ್ ಸೊಹೈಲ್ ಮೊಹ್ಮದ್‍ಗೆ ಬಿಸಿ ಮುಟ್ಟಿಸಿದ್ದಾರೆ. ಅಮೆರಿಕ, ರಷ್ಯಾ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ವಿಶ್ವರಾಷ್ಟ್ರಗಳು ಸಹ ಘಟನೆಯನ್ನು ಖಂಡಿಸಿವೆ. ಆದರೆ, ಜೈಷ್ ಮುಖ್ಯಸ್ಥ ಉಗ್ರ ಅಜರ್ ಮಸೂದ್‍ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಬೆಂಬಲ ನೀಡಬೇಕೆನ್ನುವ ಬೇಡಿಕೆಯನ್ನು ಚೀನಾ ಮತ್ತೆ ತಿರಸ್ಕರಿಸಿದೆ. ಈ ನಡುವೆ ದೆಹಲಿಯಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಜನ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪರಮಾಪ್ತ ರಾಷ್ಟ್ರ?
1996ರಲ್ಲಿ ಭಾರತ ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಂಕ ಹಾಗೂ ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ(ಗ್ಯಾಟ್)ಅನ್ವಯ ಪಾಕ್‍ಗೆ ಪರಮಾಪ್ತ ಸ್ಥಾನ ನೀಡಿತ್ತು. ಇದರ ಅನ್ವಯ ಎರಡು ರಾಷ್ಟ್ರಗಳ ಅಭಿವೃದ್ಧಿ ದೃಷ್ಟಿಯಿಂದ ವ್ಯಾಪಾರದಲ್ಲಿ ಸೀಮಾ ಸುಂಕವನ್ನು ಕಡಿಮೆ ಮಾಡಲಾಗಿತ್ತು.
`ಪರಮಾಪ್ತ ರಾಷ್ಟ್ರ’ ಕಿತ್ತೆಸದರೆ ಪರಿಣಾಮ ಏನು..?
* ಪಾಕಿಸ್ತಾನಕ್ಕೆ 1996ರಲ್ಲಿ ನೀಡಲಾಗಿದ್ದ ‘ಪರಮಾಪ್ತ ರಾಷ್ಟ್ರ’ ಎಂಬ ಮಾನ್ಯತೆ ನೀಡಿತ್ತು.
* ಪಾಕಿಸ್ತಾನದಿಂದ ಭಾರತಕ್ಕೆ ಬರುವ ಸರಕುಗಳಿಗೆ ಸೀಮಾ ಸುಂಕ ಹೆಚ್ಚಳ ಮಾಡಬಹುದು.
* ಜಾಗತಿಕ ಮಟ್ಟದಲ್ಲೂ ಪಾಕಿಸ್ತಾನಕ್ಕೆ ಛೀಮಾರಿ, ವ್ಯತಿರಿಕ್ತ ಪರಿಣಾಮ ಬೀರಬಹುದು.
* ಭಾರತ ಪಾಕಿಸ್ತಾನದಿಂದ ಹಣ್ಣು, ಸಿಮೆಂಟ್, ಚರ್ಮ, ರಾಸಾಯನಿಕ ಸಂಬಾರು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.
* ಭಾರತ ಈ ನಿರ್ಧಾರ ಪಾಕಿಸ್ತಾನದ ಮೇಲೆ ಅಲ್ಪ ಪ್ರಮಾಣದ ಉಂಟು ಮಾಡಲಿದೆ. ಏಕೆಂದರೆ ಈಗಾಗಲೇ ಪಾಕ್ ಭಾರತದ ಹಲವು ವಸ್ತುಗಳ ಆಮದು ಮಾಡಿಕೊಳ್ಳಲು ನಿಷೇಧವನ್ನು ವಿಧಿಸಿದೆ.
* ವಿಶ್ವಬ್ಯಾಂಕ್ ಮಾಹಿತಿ ಅನ್ವಯ ಭಾರತ ಹಾಗೂ ಪಾಕಿಸ್ತಾನ ನಡುವೆ ಕಡಿಮೆ ಮಟ್ಟದ ವ್ಯಾಪಾರ ನಡೆಯುತ್ತಿದೆ. 2017-18 ರಲ್ಲಿ 2.41 ಶತಕೋಟಿ ಡಾಲರ್ ವ್ಯಾಪಾರ ನಡೆದರೆ, 2016-17 ರಲ್ಲಿ 2.27 ಶತಕೋಟಿ ವ್ಯಾಪಾರ ನಡೆದಿತ್ತು.
* ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಳ ಆಗುವಂತೆ ಮಾಡಿ ಮುಂದಿನ ದಿನಗಳಲ್ಲಿ ಪಾಕಿಸ್ತಾನವನ್ನು ಏಕಾಂಗಿ ಆಗಿಸಲು ಈ ನಿರ್ಧಾರ ಸಹಾಯಕವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv