ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಈ ಕರುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು ಮುಗಿಬಿದ್ದಿದ್ದರು.
ಬೆಂಗಳೂರಿನ ಮಾರತಹಳ್ಳಿ ಬಳಿಯ ಬಾಲಾಜಿ ಲೇಔಟ್ ನಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಕಾಮನ್ ಆಗಿದ್ದರೂ ಈ ದಟ್ಟ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಹಸುವೊಂದು ಅವಳಿ ಗಂಡು ಕರುಗಳಿಗೆ ಜನ್ಮ ಕೊಟ್ಟಿದ್ದು ಸೆಲ್ಫಿ ಕ್ರೇಜ್‍ಗೆ ಕಾರಣವಾಗಿದೆ.
ವಿಶ್ವನಾಥ್ ರೆಡ್ಡಿ ಎಂಬವರು ಕಳೆದ 20 ವರ್ಷಗಳಿಂದ ಹಸು ಸಾಗಣಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಹಸು ಅವಳಿ ಕರುಗಳಿಗೆ ಜನ್ಮ ಕೊಟ್ಟಿದೆ. ಹೀಗಾಗಿ ತಮಗೂ ಇದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಸಂಡೇ ಸ್ಪೆಷಲ್ ಎಂಬಂತೆ ಅವಳಿ ಕರುಗಳು ಪುಟಾಣಿಗಳ ರಜೆ ಮಜಾವನ್ನು ಮತ್ತಷ್ಟು ಕಲರ್ ಫುಲ್ ಗೊಳಿಸಿದವು.
ಮಕ್ಕಳು ಅವಳಿ ಕರುವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv