ಮೈಸೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ತೀವ್ರ ಬೆಳಣಿಗೆಗಳ ನಡುವೆಯೇ ಸಮ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಇದರಂತೆ ಶನಿವಾರ ಬೆಳಗ್ಗೆಯೇ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ.
ಬಜೆಟ್ ಅಧಿವೇಶನದ ಬಳಿಕ ಮೈಸೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಾತುರಿ ತೋರಿದರು. ಅಲ್ಲದೇ ಈ ಬಗ್ಗೆ ಸಿದ್ದರಾಮಯ್ಯ ಅವರೇ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಿಮಗೇ ತಿಳಿದಿದೆ. ಆದ್ದರಿಂದ ಇವತ್ತೇ ನಾನು ಬೆಂಗಳೂರಿಗೆ ವಾಪಸ್ ಹೋಗಬೇಕು. ತರಾತುರಿಯಲ್ಲಿ ಮೈಸೂರಿಗೆ ಆಗಮಿಸಿದ್ದು, ಬೆಳಗ್ಗೆ 6 ಗಂಟೆಗೆ ದೆಹಲಿಗೆ ಹೋಗಬೇಕು ಎಂದು ಹೈಕಮಾಂಡ್ ಕರೆ ನೀಡುವ ಕುರಿತು ಪರೋಕ್ಷವಾಗಿ ಖಚಿತ ಪಡಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಕನಕ ಭವನ ನಿರ್ಮಾಣಕ್ಕೆ ಕೆ.ಎಸ್. ಈಶ್ವರಪ್ಪರ ಕೊಡುಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರ ಮಾತಿಗೆ ಸಭಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವೇಳೆ ಸಭಿಕರನ್ನು ಮತ್ತೆ ಸುಮ್ಮನಾಗಿಸಿದ ಅವರು, `ಹೇ ಸತ್ಯವನ್ನ ತಿರುಚಬಾರದು, ಅವರ ಕೊಡುಗೆಯೂ ಇದೆ’ ಎಂದು ಸ್ಪಷ್ಟನೆ ನೀಡಿದರು.
ಬಾದಾಮಿಯಲ್ಲಿ ಸಾಮೂಹಿಕ ವಿವಾಹ: ಬಾಗಲಕೋಟೆಯ ಬಾದಾಮಿಯಲ್ಲಿ ಮುಂದಿನ ವರ್ಷ 500 ಜೋಡಿ ಮದುವೆ ಮಾಡಿಸುವ ಕುರಿತು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ಈ ಹಿಂದೆ ಮೈಸೂರಿನಲ್ಲಿ ಮದುವೆ ಕಾರ್ಯಕ್ರಮ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ ಮೈಸೂರಿನವರು ವೋಟು ಕೊಡಲಿಲ್ಲ, ಬಾದಾಮಿಯವರು ಕೊಟ್ಟಿದ್ದಾರೆ ಅದಕ್ಕೆ ಅಲ್ಲಿ ಮಾಡಿಸುತ್ತೇನೆ. ಮದುವೆಯ ಎಲ್ಲಾ ವೆಚ್ಚವನ್ನು ನಾನೇ ನೋಡಿಕೊಳ್ಳುತ್ತೇನೆ, ಅಂದರೆ ದಾನಿಗಳ ಕೈಯಲ್ಲಿ ಕೊಡಿಸುತ್ತೇನೆ. ಎಲ್ಲಾ ಬಡವರಿಗೂ ಅನುಕೂಲವಾಗಲು ಸಾಮೂಹಿಕ ವಿವಾಹ ಮಾಡಿಸುತ್ತೇನೆ ಎಂದು ವಿವರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv