ಹೈದರಾಬಾದ್: ಪ್ರೀತಿಯ ವಿಷಯವಾಗಿ ತಂದೆಯ ಜೊತೆ ವಾದ ಮಾಡಿದ ಬಳಿಕ 20 ವರ್ಷದ ಯುವತಿ ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋತಪಾಲೆಮ್ ಗ್ರಾಮದಲ್ಲಿ ನಡೆದಿದೆ.
ವೈಷ್ಣವಿ ಮೃತ ಯುವತಿ. ತಂದೆ ವೆಂಕರೆಡ್ಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ವೈಷ್ಣವಿ ಮೃತಪಟ್ಟಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ವೈಷ್ಣವಿ ಒನ್ಗೋಲ್ ನಲ್ಲಿರುವ ಹರ್ಷಿಣಿ ಡಿಗ್ರಿ ಕಾಲೇಜಿನಿಂದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವೈಷ್ಣವಿ ಪ್ರೀತಿ ವಿಚಾರ ತಂದೆಗೆ ತಿಳಿದಿದ್ದು, ಬಳಿಕ ಇಬ್ಬರ ನಡುವೆ ಜಗಳವಾಗಿದೆ. ವೈಷ್ಣವಿ ತನ್ನ ಪ್ರಿಯಕರ ಜೊತೆ ಓಡಿಹೋಗಲು ಪ್ಲಾನ್ ಮಾಡಿದ್ದಳು. ಆಗ ತಂದೆ ವೆಂಕರೆಡ್ಡಿ ಆತನನ್ನು ಮಾತನಾಡಿಸಬಾರದು, ಭೇಟಿಯಾಗಬಾರದು ಎಂದು ಹೇಳಿದ್ದಾನೆ. ಆದರೆ ಇದಕ್ಕೆ ವೈಷ್ಣವಿ ನಿರಾಕರಸಿದ್ದಾಳೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅಥವಾ ತಂದೆಯೇ ಮಗಳನ್ನು ಹತ್ಯೆ ಮಾಡಿದ್ದಾನಾ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಿದೆ.
ಸದ್ಯಕ್ಕೆ ನಾವು ಈ ಪ್ರಕರಣವನ್ನು ಅನುಮಾನಸ್ಪದ ಸಾವು ಎಂದು ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಐಪಿಸಿ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ರಂಗನಾಥ್ ಹೇಳಿದ್ದಾರೆ.
ಮೃತ ಹುಡುಗಿಯು ವಿವಾಹಿತವಾಗಿ ಓಡಿಹೋಗಿಲ್ಲ. ಆದರೆ ಅವಳ ತಂದೆ ಅವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv