ಮೈಸೂರು: ಜಿಲ್ಲೆಯ ವಿಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮಾಡಿ ಓರ್ವ ಸೈಕಲ್ ಕಳ್ಳನನ್ನು ಬಂಧಿಸಿದ್ದಾರೆ.
ಹಾಸನ ಮೂಲದ ವೆಂಕಟೇಶ್ (30) ಬಂಧಿತ ಆರೋಪಿ. ಈತ ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿ ಪಾಳು ಮನೆಯೊಂದರಲ್ಲಿ ವಾಸಿಸುತ್ತಿದ್ದನು. ಆರೋಪಿ ವೆಂಕಟೇಶ್ ವಿವಿಧ ಕಂಪನಿಗಳಲ್ಲಿ ಬೆಲೆ ಬಾಳುವ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದನು. ಇದನ್ನೇ ತನ್ನ ಕಸುಬನ್ನಾಗಿ ಮಾಡಿಕೊಂಡಿದ್ದು, ಕದ್ದ ಸೈಕಲ್‍ಗಳನ್ನು ಮಾರಾಟ ಮಾಡುವ ವೇಳೆ ವೆಂಕಟೇಶ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಬಂಧಿತ ಆರೋಪಿ ಕಳೆದ ಆರು ತಿಂಗಳಿನಿಂದ ಮೈಸೂರಿನ ವಿವಿಧೆಡೆ ಸೈಕಲ್‍ಗಳನ್ನು ಕಳ್ಳತನ ಮಾಡಿದ್ದಾನೆ. ಬಂಧಿತ ವೆಂಕಟೇಶ್ ಬಳಿ ಸುಮಾರು 2 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಗಳ 19 ಸೈಕಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv