ಪ್ರಿಯಾಂಕ ಗಾಂಧಿಯನ್ನ ಬಾಲಿವುಡ್ ನಟಿಯ ಪುತ್ರನೊಂದಿಗೆ ಹೋಲಿಸಿದ ಬಿಜೆಪಿ ಸಂಸದೆ

Public TV
1 Min Read
Priyanak Poonam

ಮುಂಬೈ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಮತ್ತು ಸಂಸದೆ ಪೂನಂ ಮಹಾಜನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರಿ ಪ್ರಿಯಾಂಕ ಗಾಂಧಿ ಅವರನ್ನು ಬಾಲಿವುಡ್ ಬೇಬೋ ಕರೀನಾ ಕಪೂರ್ ಪುತ್ರ ತೈಮೂರ್ ಅಲಿಯೊಂದಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ.

ಭಾನುವಾರ ನಗರದ ಸೌಮ್ಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೂನಂ ಮಹಾಜನ್ ತಮ್ಮ ಸಮಾರೋಪ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶರದ್ ಪವಾರ್, ಮಹಾಭಾರತದಲ್ಲಿ ಬರುವ ಶಕುನಿ ಮತ್ತು ರಾಮಯಾಣದ ಮಂಥರೆಗೆ ಹೋಲಿಸಿದರು. ಶರದ್ ಪವಾರ್ ಅವರಿಗೆ ಏನು ಸಿಗಲಿಲ್ಲ ಅಂದ್ರೆ ಅಲ್ಲಿಯ ವಿಷಯವನ್ನು ಇಲ್ಲಿಗೆ, ಇಲ್ಲಿಯ ವಿಷಯವನ್ನು ಬೇರೆಯವರಿಗೆ ರವಾನಿಸುವ ಕೆಲಸ ಮಾಡ್ತಾರೆ. ಎಲ್ಲರು ಸೇರಿಕೊಂಡು ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಟೀಕಿಸಿದರು.

Priyanaka Taimur

ರಾಹುಲ್ ಗಾಂಧಿ ಇನ್ನು ತಾಯಿಯ ಮುದ್ದಿನ ಮಗ. ಕೆಲವು ದಿನಗಳಿಂದ ರಫೇಲ್, ರಫೇಲ್ ಎಂದು ಚೀರಾಡುತ್ತಾ ಓಡಾಡುತ್ತಿದ್ದಾರೆ. ರಫೇಲ್ ಬಗ್ಗೆ ಗೊತ್ತಿಲ್ಲದೇ ಈಗ ರಾ’ಫೂಲ್’ ಆಗಿದ್ದಾರೆ. ‘ಮಗಳನ್ನು ತನ್ನಿ ಮಗನನ್ನು ಉಳಿಸಿ’ ಎಂಬ ಉದ್ದೇಶದಿಂದ ಪ್ರಿಯಾಂಕರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಕಾಂಗ್ರೆಸ್ ನಾಯಕರು ತೈಮೂರ್ ಫೋಟೋದ ರೀತಿಯಲ್ಲಿ ಪ್ರಿಯಾಂಕ ಅವರ ಫೋಟೋಗ ಕಟೌಟ್ ಹಾಕಲಾಗುತ್ತಿದೆ ಎಂದು ವ್ಯಂಗ್ಯ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *