ಚಿಕ್ಕಬಳ್ಳಾಪುರ: ತಂಗಿಯನ್ನು ಬಸ್ಸಿಗೆ ಬಿಡಲೆಂದು ತನ್ನ ಬೈಕಿನಲ್ಲಿ ಕರೆದುಕೊಂಡು ಬಂದಿದ್ದ ಅಣ್ಣನೊಬ್ಬ ವಾಪಸ್ ಯು ಟರ್ನ್ ತೆಗೆದುಕೊಂಡು ರಸ್ತೆ ದಾಟುವಾಗ ಕೆಎಸ್ಆರ್‌ಟಿಸಿ ಬಸ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಅರದೇಶನಹಳ್ಳಿ ಗೇಟ್ ಬಳಿ ನಡೆದಿದೆ. ನಿತೀಶ್(17) ಮೃತ ದುರ್ದೈವಿ. ಇಂದು ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಜಾಲಿಗೆ ನಿವಾಸಿ ನಿತೀಶ್ ತನ್ನ ತಂಗಿಯನ್ನು ಬಸ್ಸಿಗೆ ಬಿಡಲೆಂದು ಬೈಕ್‍ನಲ್ಲಿ ಕರೆದುಕೊಂಡು ಅರದೇಶನಹಳ್ಳಿ ಗೇಟ್ ಬಂದಿದ್ದನು.
ಬಸ್ ನಿಲ್ದಾಣದಲ್ಲಿ ತಂಗಿಯನ್ನು ಬಿಟ್ಟು ವಾಪಸ್ ರಸ್ತೆ ದಾಟುವಾಗ ಗೌರಿಬಿದನೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಕೆಳಗೆ ಸಿಲುಕಿದ್ದಾನೆ. ಬೈಕ್ ಸಮೇತ ನಿತೀಶ್ ಬಸ್ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿತೀಶ್ ಮೃತಪಟ್ಟಿದ್ದಾನೆ.
ಈ ಸಂಬಂಧ ಕೆಎಸ್ಆರ್‌ಟಿಸಿ ಬಸ್ ಚಾಲಕನ್ನು ಬಂಧಿಸಲಾಗಿದ್ದು, ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv