ಬೆಂಗಳೂರು: ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕನಿಗೆ ಕೋಟಿ ಕೋಟಿ ವಂಚನೆ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೂರಾರು ಬ್ರಾಂಚ್‍ಗಳನ್ನು ಹೊಂದಿರುವ ಮಣಿಪಾಲ್ ಗ್ರೂಪ್‍ನಲ್ಲಿ ಇಂಥದ್ದೊಂದು ವಂಚನೆ ನಡೆದಿದೆ. ಸಂದೀಪ್ ಗುರುರಾಜ್ ಕಂಪನಿಯ ಹೈ ಸೆಕ್ಯೂರಿಟಿ ಬೇಧಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ವ್ಯಕ್ತಿ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯು ಮೆರಿಯಟ್‍ನಲ್ಲಿರುವ ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಡಿಜಿಎಂ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಕಂಪನಿಯ ಹಣದ ಮೇಲೆ ಕಣ್ಣು ಬಿದ್ದಿತ್ತು. ಆದರೆ ಹಣ ಹೊಡೆಯೋದು ಅಷ್ಟು ಸುಲಭವಾಗಿರಲಿಲ್ಲ.
ಮಣಿಪಾಲ್ ಗ್ರೂಪ್‍ನ ಎಲ್ಲಾ ಹಣದ ವ್ಯವಹಾರಗಳು ನಡೆಯೋದು ಆಫ್ರಿಕಾ ದೇಶದ ಮಾರಿಷೆಸ್‍ನಲ್ಲಿ. ಅಲ್ಲಿನ ಬ್ಯಾಂಕ್‍ನಲ್ಲಿ ಯಾವುದೇ ಹಣ ವರ್ಗಾವಣೆ ಮಾಡಬೇಕಾದ್ರೂ ಮಣಿಪಾಲ್ ಎಂ.ಡಿ ರಂಜಿತ್ ಪೈ ವಾಯ್ಸ್ ಕೋಡ್ ಮ್ಯಾಚ್ ಆಗಬೇಕು. ವಾಯ್ಸ್ ಕೊಡ್ ಮ್ಯಾಚ್ ಆದಲ್ಲಿ ಮಾತ್ರ ಹಣ ವರ್ಗಾವಣೆ ಮಾಡಬಹುದು. ಈ ವಿಚಾರ ತಿಳಿದ ಡಿಜಿಎಂ ಸಂದೀಪ್ ಗುರುರಾಜ್, ವರ್ಷಗಳ ಕಾಲ ರಂಜಿತ್ ಪೈರವರ ವಾಯ್ಸ್ ಮಿಮಿಕ್ರಿ ಮಾಡೋದು ಕಲೀತಿದ್ದ. ಇದನ್ನೇ ಬಳಸಿಕೊಂಡು, ಇಂಡಿಯಾದಲ್ಲಿ ಹತ್ತು ಕೋಟಿ, ವಿದೇಶಗಳಲ್ಲಿ 60 ಕೋಟಿ ಸೇರಿದಂತೆ 70 ಕೋಟಿ ಹಣ ಹಣವನ್ನು ಅಕ್ರಮವಾಗಿ ಟಾನ್ಸ್ ಫರ್ ಮಾಡಿದ್ದನು.
ಅಸಲಿಗೆ ಡಿಜಿಎಂ ಸಂದೀಪ್ ಗುರುರಾಜ್‍ಗೆ ಈ ರೀತಿಯ ಐಡಿಯಾ ಬಂದಿದ್ದು, ಅದೇ ಕಂಪನಿಯಲ್ಲಿ ಎಚ್‍ಆರ್ ಆಗಿ ಕೆಲಸ ಮಾಡ್ತಿದ್ದ ಅಮೃತಾಳ ಮೋಹದಿಂದ. ಅಮೃತಾಳಿಗೆ ಹಣದ ಆಸೆ ತೋರಿಸಿದ ಡಿಜಿಎಂ, ಮಾರಿಷಸ್‍ನಲ್ಲಿದ್ದ ಹೈ ಸೆಕ್ಯೂರಿಟಿ ಬ್ಯಾಂಕ್ ನಿಂದ ಮಾಲೀಕನ ವಾಯ್ಸ್, ಕೋಡ್ ವರ್ಡ್ಸ್ ಬಳಸಿ, ಹಂತ ಹಂತವಾಗಿ ಕೋಟಿ ಕೋಟಿ ಹಣವನ್ನು ಟಾನ್ಸ್‍ಫರ್ ಮಾಡಿಕೊಂಡಿದ್ದಾನೆ. ಅದರಲ್ಲಿ 52 ಕೋಟಿಯಷ್ಟು ಹಣವನ್ನು ಅಮೃತಾಳ ಅಕೌಂಟ್‍ಗೆ ಹಾಕಿದ್ರೆ, ತನ್ನ ಪತ್ನಿಯ ಅಕೌಂಟ್‍ಗೆ ಎಂಟು ಕೋಟಿ ಹಣ ವರ್ಗಾವಣೆ ಮಾಡಿದ್ದ. ಕೊನೆಗೆ ಇನ್ನು ಹತ್ತು ಕೋಟಿ ಹಣ ಟಾನ್ಸ್ ಫರ್ ಮಾಡುವ ವೇಳೆ ಮಾರಿಷಸ್ ಬ್ಯಾಂಕ್ ಅಧಿಕಾರಿಗಳಿಗೆ ಡೌಟ್ ಬಂದು ಎಂಡಿ ರಂಜಿತ್ ಪೈ ಗಮನಕ್ಕೆ ತಂದ ವೇಳೆ ಡಿಜಿಎಂ ಸಂದೀಪ್ ಗುರುರಾಜ್‍ನ ಅಸಲಿ ಮುಖವಾಡ ಬಯಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿ ಡಿಜಿಎಂ ಸಂದೀಪ್ ಗುರುರಾಜ್, ಪತ್ನಿ ಚಾರು ಸ್ನೀತಾ, ಪ್ರೇಯಸಿ ಅಮೃತಾ ಮತ್ತು ಆಕೆಯ ತಾಯಿ ಮೀರಾ ಚಂಗಪ್ಪರನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv