ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧ 3-0 ಸರಣಿ ಸಾಧಿಸಿ, ಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಪ್ರವಾಸ ಆರಂಭಿಸಿದ್ದಾರೆ.
2 ಏಕದಿನ ಮತ್ತು ಟಿ 20 ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಎರಡು ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
Away we go ❤️????#travelswithher pic.twitter.com/KnDhMbAG3G
— Virat Kohli (@imVkohli) January 29, 2019
ನ್ಯೂಜಿಲೆಂಡ್ ವಿರುದ್ಧ ಸೋಮವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 74 ಎಸೆತ ಎದುರಿಸಿ 6 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 60 ರನ್‍ಗಳನ್ನು ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ನ್ಯೂಜಿಲೆಂಡ್ ಗೆಲ್ಲಲು 244 ರನ್ ಗಳ ಗುರಿಯನ್ನು ಪಡೆದ ಭಾರತ 3 ವಿಕೆಟ್ ನಷ್ಟಕ್ಕೆ 245 ರನ್ ಹೊಡೆದು 7 ವಿಕೆಟ್ ಗಳಿಂದ ಗೆದ್ದು ಸಂಭ್ರಮಿಸಿತ್ತು.
ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲುವು ಸಾಧಿಸಿದ್ದರಿಂದ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಹೀಗಾಗಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಇರುವ ಫೋಟೋ ಹಾಕಿ, ನಾವು ಹೋಗಿ ಬರುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv