ಪೊಲೀಸರ ಗೂಂಡಾವರ್ತನೆಗೆ ಅಣ್ಣಾಮಲೈ ಪ್ರತಿಕ್ರಿಯೆ

Public TV
2 Min Read
ANNAMALAI copy

ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದ ಯುವತಿ ಮತ್ತು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಎಎಸ್‍ಐ ಆಫೀಸ್‍ರನ್ನು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ, ಪೊಲೀಸರು ತಪ್ಪು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರು ಮಹಿಳೆಯನ್ನು ಹೊಡೆಯಬಾರದಿತ್ತು. ಹೀಗಾಗಿ ವಿಚಾರಣೆ ಮಾಡಿ ತಕ್ಷಣವೇ ಎಎಸ್‍ಐ ಆಫೀಸ್‍ರನ್ನು ಸಸ್ಪೆಂಡ್ ಮಾಡಿದ್ದೀವಿ ಎಂದು ಹೇಳಿದ್ದಾರೆ.

ks layout

ಹಿನ್ನೆಲೆ:
ಇದೇ ತಿಂಗಳು 20ರಂದು ಹೋಟೆಲ್‍ವೊಂದರಲ್ಲಿ ಗಲಾಟೆ ನಡೆಯುತ್ತಿದೆ ಎಂದು ಪೊಲೀಸ್ ಠಾಣೆಗೆ ಫೋನ್ ಮಾಡಿದ್ದರು. ನಾವು ಹೋಟೆಲ್ ಗೆ ಹೋಗಿ ನೋಡಿದಾಗ ಆಂಧ್ರದಿಂದ ಬಂದಿದ್ದ ಜನರು ಒಂದು ಹುಡುಗಿಯ ಜೊತೆ ಗಲಾಟೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಹುಡುಗಿಯನ್ನು ಕಿಡ್ನಾಪ್ ಮಾಡಲು ಪ್ರಯತ್ನ ಮಾಡುತ್ತಿದ್ದರು. ಬಳಿಕ ನಮ್ಮ ಪೊಲೀಸರು ಹುಡುಗಿಯನ್ನು ಕಾಪಾಡಿ ಠಾಣೆಗೆ ಕರೆದುಕೊಂಡು ಬಂದು ರಕ್ಷಣೆ ನೀಡಿದ್ದರು.

ಹುಡುಗಿಗೆ 11 ವರ್ಷ ಇರುವಾಗಲೇ ತಾಯಿ ಅವರ ತಮ್ಮನ ಜೊತೆ ಮದುವೆ ಮಾಡಿಕೊಟ್ಟಿರುತ್ತಾರೆ. ಹುಡುಗಿ ಸುಮಾರು 6 ವರ್ಷಗಳ ಕಾಲ ಸಂಸಾರ ಮಾಡಿದ್ದು, ಬಳಿಕ ಪತಿ, ಮನೆಯವರನ್ನು ಬಿಟ್ಟು ಬೆಂಗಳೂರಿಗೆ ಬಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗಿ ಬೆಂಗಳೂರಿನಲ್ಲಿ ಇರುವ ಬಗ್ಗೆ ತಿಳಿದು ಕುಟುಂಬದವರು ಬಂದು ಹುಡುಗಿಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಈ ರೀತಿ ಮಾಡಿದ್ದಾರೆ.

POLICE 1

ಹುಡುಗಿಯ ತಾಯಿ ಮತ್ತು ಕುಟುಂಬವರು ಪೊಲೀಸ್ ಠಾಣೆಗೆ ಬಂದು, ಹುಡುಗಿಯನ್ನು ನಮ್ಮ ಜೊತೆ ಕಳುಹಿಸಿ, ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಠಾಣೆಯ ಒಳಗೆ ಬಂದು ಗಲಾಟೆ ಮಾಡುತ್ತಿದ್ದರು. ಆಗ ಪೊಲೀಸರು ಹುಡುಗಿ ಮೇಜರ್ ಇದ್ದಾರೆ. ಆಕೆಗೆ ನಿಮ್ಮ ಜೊತೆ ಬರುವುದಕ್ಕೆ ಇಷ್ಟಪಡುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನಾವು ಆಕೆಯನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಹುಡುಗಿಯ ತಾಯಿ ಮಹಿಳಾ ಪೊಲೀಸರನ್ನು ತಳ್ಳಿ ಒಳಗೆ ಹೋಗಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಎಎಸ್‍ಐ ಬಂದು ಮಹಿಳೆಗೆ ಹೊಡೆದಿದ್ದಾರೆ. ಆದರೆ ಈ ರೀತಿ ಮಾಡಿದ್ದು ತಪ್ಪು. ಅದಕ್ಕೆ ಈಗಾಗಲೇ ಅವರನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ks layout 2

ಈ ರೀತಿ ಘಟನೆ ಯಾವಾಗಲೂ ಆಗುವುದಿಲ್ಲ. ಒಮ್ಮೆ ನಮ್ಮ ಕೈ ಮೀರಿ ಹೋಗುತ್ತದೆ. ಆದರೆ ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಿ ಕ್ರಮ ತೆಗೆದುಕೊಂಡಿದ್ದೇವೆ. ಎಎಸ್‍ಐ ಪೊಲೀಸರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ. ಹುಡುಗಿಗೆ ರಕ್ಷಣೆ ಕೊಡಬೇಕೆಂದು ಮಹಿಳೆಗೆ ಹೊಡೆದಿದ್ದಾರೆ. ಆದರೆ ಮಹಿಳೆಗೆ ತಾಳ್ಮೆಯಿಂದ ಹೇಳಬಹುದಿತ್ತು. ಪೊಲೀಸರಿಂದ ತಪ್ಪಾಗಿದೆ. ಆದ್ದರಿಂದ ನಾವು ವಿಚಾರಣೆ ಮಾಡಿ ಅವರಿಗೆ ಶಿಕ್ಷೆ ಕೊಟ್ಟಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

https://www.youtube.com/watch?v=EdrGZ73DjtE

https://www.youtube.com/watch?v=TVjkII_iJWw

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *