ನ್ಯೂಜಿಲೆಂಡ್ ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ

Public TV
1 Min Read
kohli

ನೇಪಿಯರ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಂದಿನ ನ್ಯೂಜಿಲೆಂಡ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯಗಳು ಹಾಗೂ ಟಿ20 ಸರಣಿಗೆ ವಿಶ್ರಾಂತಿ ನೀಡಿರುವುದಾಗಿ ಬಿಸಿಸಿಐ ಮಾಹಿತಿ ನೀಡಿದೆ.

ನಾಯಕ ಕೊಹ್ಲಿ ಮೇಲಿರುವ ಒತ್ತಡವನ್ನು ಗಮನಿಸಿ ಕಳೆದ ಏಷ್ಯಾಕಪ್ ಟೂರ್ನಿ ವೇಳೆ ವಿಶ್ರಾಂತಿ ನೀಡಲಾಗಿತ್ತು. ಸದ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ವಿಶ್ರಾಂತಿ ನೀಡಿದೆ. 2018 ರಿಂದಲೂ ಕೊಹ್ಲಿ ವೇಳಾಪಟ್ಟಿ ಕುರಿತು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳುತ್ತಿರುವ ಬಿಸಿಸಿಐ ಮಾರ್ಚ್ ತಿಂಗಳಲ್ಲಿ ನಡೆದ ನಿದಾಸ್ ಟ್ರೋಫಿ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ವಿಶ್ರಾಂತಿ ನೀಡಿತ್ತು.

indvnz 2

2018ರ ಬಳಿಕ ಕೊಹ್ಲಿ 14 ಟೆಸ್ಟ್ ಪಂದ್ಯಗಳ್ನು ಆಡಿದ್ದು, ಇದರಲ್ಲಿ 1,345 ರನ್ ಹಾಗು 18 ಏಕದಿನ ಪಂದ್ಯಗಳಿಂದ 1,400 ರನ್ ಸಿಡಿಸಿ ಟಾಪ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಐಸಿಸಿ ಪ್ರಕಟಿಸಿದ ವರ್ಷದ ಟಾಪ್ 3 ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕಳೆದ 13 ತಿಂಗಳಿನಲ್ಲಿ ನಾಯಕ ಕೊಹ್ಲಿ ಹಾಗೂ ಬೌಲರ್ ಬುಮ್ರಾ ಅತಿ ಹೆಚ್ಚು ವರ್ಕ್ ಲೋಡ್ ಹೊಂದಿರುವ ಟೀಂ ಇಂಡಿಯಾ ಆಟಗಾರರಾಗಿದ್ದು, ಮುಂದಿನ ವಿಶ್ವಕಪ್ ದೃಷ್ಟಿಯಿಂದ ಇಬ್ಬರಿಗೂ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ತೀರ್ಮಾನಿಸಿದೆ. ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

ಸರಣಿಯಲ್ಲಿ ನೇಪಿಯರ್ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 1-0ರಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ನಾಯಕ ವಿರಾಟ್ ಕೊಹ್ಲಿ ಅವರ ಸ್ಥಾನದಲ್ಲಿ ಬೇರೆ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ ಎಂಬ ಮಾಹಿತಿ ಲಭಿಸಿದೆ. ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವುದರಿಂದ ಈ ದಶಕದಲ್ಲಿ ಏಷ್ಯಾ ಖಂಡದಿಂದ ಹೊರ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಕೊಹ್ಲಿ ಇಲ್ಲದ ತಂಡ ಕಣಕ್ಕೆ ಇಳಿಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *