ದಾವಣಗೆರೆ: ದಂಪತಿಗಳಿಬ್ಬರು ಸಾವಿನಲ್ಲಿಯೂ ಒಂದಾಗಿರುವ ಘಟನೆ ದಾವಣಗೆರೆಯ ವಿನೋಭ ನಗರದಲ್ಲಿ ನಡೆದಿದೆ.
ಗಾಯಕವಾಡ ಕೃಷ್ಣಾಮೂರ್ತಿ (78) ಹಾಗೂ ಅನುರಾಧ (62) ಸಾವನ್ನಪ್ಪಿದ ಆದರ್ಶ ದಂಪತಿಯಾಗಿದ್ದು, ಕೃಷ್ಣಾಮೂರ್ತಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುರುವಾರ ಸಂಜೆ ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆತಂದಿದ್ದರು.
ಇಂದು ಬೆಳಗಿನ ಜಾವ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ. ಸಾವಿನ ವಿಷಯವನ್ನು ಪತ್ನಿಗೆ ಕುಟುಂಬದವರು ತಿಳಿಸಲು ಹೋದಾಗ ಮನೆಯ ಬೇರೆ ಕೊಠಡಿಯಲ್ಲಿದ್ದ ಅನುರಾಧ ಅವರು ಹೃದಯಾಘಾತದಿಂದ ಕೂಡ ಸಾವಪ್ಪಿದ್ದರು. ವಿಸ್ಮಯ ಎನ್ನುವಂತೆ ನಲವತ್ತು ವರ್ಷ ಜೊತೆಯಲ್ಲಿಯೇ ಜೀವನ ಮಾಡಿ ಕೊನೆಗೆ ಸಾವಿನಲ್ಲೂ ಒಂದಾಗಿ ಅನ್ಯೋನ್ಯ ದಂಪತಿ ಎನಿಸಿಕೊಂಡಿದ್ದಾರೆ.
ಇನ್ನೂ ಕುಟುಂಬಸ್ಥರು ಏಕಕಾಲಕ್ಕೆ ದಂಪತಿಯ ವಿಧಿ ವಿಧಾನ ನಡೆಸಲಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಅವರಿಗೂ ಮದುವೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv