ಅವ್ರದ್ದೆಲ್ಲ ಟೆಸ್ಟ್ ಮ್ಯಾಚ್, ನಮ್ದೆಲ್ಲ ಒನ್ ಡೇ ಮ್ಯಾಚ್: ಆಪರೇಷನ್ ಕಮಲಕ್ಕೆ ಖಾದರ್ ವ್ಯಂಗ್ಯ

Public TV
1 Min Read
utkBig vb 36

ಮಂಗಳೂರು: ಬಿಜೆಪಿಯವರು ಮಾಡೋದೆಲ್ಲ ವ್ಯರ್ಥ ಕಸರತ್ತು. ಬಿಜೆಪಿ ಅವರದೆಲ್ಲ ಟೆಸ್ಟ್ ಮ್ಯಾಚ್, ನಾವೆಲ್ಲ ಒನ್ ಡೇ ಮ್ಯಾಚಲ್ಲಿ ಕೆಲಸ ಮುಗಿಸುತ್ತೇವೆ ಅಂತ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿಯಲ್ಲಿ ಇರುವ ನಾಲ್ಕು ಸದಸ್ಯರನ್ನು ಹಿಡಿಯಲಾಗದವರು, ಕಾಂಗ್ರೆಸ್‍ನ 15 ಶಾಸಕರನ್ನು ಹಿಡಿಯೊಕ್ಕಾಗುತ್ತಾ? ಅವರದ್ದೆಲ್ಲ ಟೆಸ್ಟ್ ಮ್ಯಾಚ್ ಆದ್ರೆ ನಮ್ದೆಲ್ಲ ಒನ್ ಡೇ ಮ್ಯಾಚ್. ಒಂದೇ ದಿನದಲ್ಲಿ ಕೆಲಸ ಮಾಡಿ ಮುಗಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಬಹುಮತ ಬರುತ್ತದೆ ಎಂದು ಗೊತ್ತಾಗಿ ಬಿಜೆಪಿ ಅವರು ಗೊಂದಲ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಅವರನ್ನು ಜನರು ಪ್ರಶ್ನೆ ಮಾಡಬೇಕಾಗಿದೆ ಎಂದರು.

mng u.t khadar

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಪಕ್ಷಕ್ಕೆ ತೊಂದರೆಯಾಗುವ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಮುಂದೆ ಕೂಡ ಚೆನ್ನಾಗಿ ನಡೆಯುತ್ತದೆ. ಬಿಜೆಪಿ ಅವರು ವಿರೋಧ ಪಕ್ಷದಲ್ಲಿದ್ದು ಸಾಮಾಜಕ್ಕೆ ಒಳ್ಳೆಯದನ್ನ ಮಾಡಲು ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಈ ರೀತಿ ಕೆಲಸ ಮಾಡುವುದು ತಪ್ಪು ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *