ಹೈದರಾಬಾದ್: ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಆಸ್ಪತ್ರೆಯಲ್ಲೇ ಅವರಿಗೆ ಮದುವೆ ಮಾಡಿಸಿದ ಘಟನೆಯೊಂದು ತೆಲಂಗಾಣದಲ್ಲಿರುವ ವಿಕರಾಬಾದ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ.
ರೇಶ್ಮಾ(19) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ರೇಶ್ಮಾ 21 ವರ್ಷದ ನವಾಜ್ ಎಂಬವನನ್ನು ಪ್ರೀತಿಸುತ್ತಿದ್ದಳು. ರೇಶ್ಮಾ ಸಹೋದರಿ ನವಾಜ್ ಸಹೋದರನ ಜೊತೆ ಮದುವೆ ಆಗಿದ್ದಾರೆ. ಈ ವೇಳೆ ರೇಶ್ಮಾ ಹಾಗೂ ನವಾಜ್ ನಡುವೆ ಪ್ರೀತಿ ಶುರುವಾಗಿದೆ.
Vikarabad: A couple Reshma and Nawaz got married in a hospital. The two had earlier attempted suicide after parents opposed their relationship. The families gave consent after the suicide attempt. #Telangana pic.twitter.com/AHFvEBPd4b
— ANI (@ANI) January 12, 2019
ರೇಶ್ಮಾ ಅವರ ಪೋಷಕರು ವಿಕರಾಬಾದ್ ಜಿಲ್ಲೆಯ ಕುಕ್ಕಿಂದದಲ್ಲಿ ವಾಸಿಸುತ್ತಿದ್ದಾರೆ. ರೇಶ್ಮಾ, ನವಾಜ್‍ನನ್ನು ಪ್ರೀತಿಸುತ್ತಿದ್ದ ವಿಷಯ ಆಕೆ ಪೋಷಕರಿಗೆ ಗೊತ್ತಾಗಿದೆ. ಬಳಿಕ ಆಕೆಯ ಪ್ರೀತಿಯನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಶ್ಮಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೇಶ್ಮಾ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದ ನವಾಜ್ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ನವಾಜ್ ಕೂಡ ಅದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೈದ್ಯರು ರೇಶ್ಮಾ ಸೇವಿಸಿದ ಕ್ರಿಮಿನಾಶಕವನ್ನು ಪರಿಶೀಲಿಸುತ್ತಿದ್ದಾಗ ನವಾಜ್ ಅದನ್ನು ಕಸಿದುಕೊಂಡು ಆತನೂ ಅದನ್ನು ಸೇವಿಸಿದ್ದಾನೆ ಎನ್ನಲಾಗಿದೆ.
ಈ ಘಟನೆ ನಡೆದ ಬಳಿಕ ರೇಶ್ಮಾ ಹಾಗೂ ನವಾಜ್ ಕುಟುಂಬದವರು ಈ ವಿಷಯದ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ರೇಶ್ಮಾ ಹಾಗೂ ನವಾಜ್ ಜೊತೆಯಲ್ಲಿ ಒಟ್ಟಿಗೆ ಜೀವನ ಮಾಡಲಿ ಎಂದು ನಿರ್ಧರಿಸಿದರು. ಬಳಿಕ ಅದೇ ಆಸ್ಪತ್ರೆಯಲ್ಲೇ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv