ವಿಜಯಪುರ: ಪತಿಯ ಕಿರುಕುಳ ತಾಳಲಾರದೇ ಅದೆಷ್ಟೋ ಮಹಿಳೆಯರು ಯಾವಾಗ ತಮ್ಮ ಪತಿಯಿಂದ ಮುಕ್ತಿ ಸಿಗತ್ತೆ ಎಂದು ಕಾಯುತ್ತಿರುತ್ತಾರೆ. ಆದರೆ ವಿಜಯಪುರದ ಮಹಿಳೆಯೊಬ್ಬರು ಏನೇ ಆದರೂ ಗಂಡ ಬೇಕು ಗಂಡ ಎಂದು ಹೇಳುತ್ತಿದ್ದಾರೆ.
ಸವಿತಾ ಗಂಡ ಬೇಕು ಎನ್ನುತ್ತಿರುವ ಮಹಿಳೆ. ಸವಿತಾ ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೋಲ್ಹಾರ ಪಟ್ಟಣದವರಾಗಿದ್ದು, ಸಂಗಮೇಶ್ ಮೂಲತಃ ವಿಜಯಪುರ ತಾಲೂಕಿನ ಕಾಕಂಡಕಿ ಗ್ರಾಮದವನು. ಸವಿತಾ ಹಾಗೂ ಸಂಗಮೇಶ್ ಮದುವೆ ಆಗಿ ಎರಡು ವರ್ಷಗಳಾಗಿದೆ. ಮದುವೆಯ ನಂತರ ಕೆಲ ದಿನಗಳು ಚೆನ್ನಾಗೆ ಇದ್ದರು. ಆದರೆ ಸಂಗಮೇಶ್ ದುಡ್ಡಿನ ದುರಾಸೆಗೆ ಸವಿತಾಗೆ ಅನೈತಿಕ ಸಂಬಂಧ ಇದೆ ಎಂದು ಹೇಳಿ ನಾನಾ ಚಿತ್ರ ಹಿಂಸೆ ಕೊಟ್ಟು ಹಣ ತಗೆದುಕೊಂಡು ಬರುವಂತೆ ಪೀಡಿಸಿ ತವರು ಮನೆಗೆ ದಬ್ಬಿದ್ದಾನೆ.
ಸಾಲದಕ್ಕೆ ಸವಿತಾ ಮರಳಿ ಸಂಗಮೇಶ್ ಮನೆಗೆ ಹೋದರೆ ನಮ್ಮ ಮದುವೆನೇ ಆಗಿಲ್ಲ. ನೀನು ನನ್ನ ಹೆಂಡತಿನೇ ಅಲ್ಲಾ ಎಂದು ಹೊರದಬ್ಬಿದ್ದಾನೆ. ಅಲ್ಲದೇ ಮತ್ತೊಂದು ಮದುವೆಗೂ ಸಂಗಮೇಶ್ ತಯಾರಿ ನಡೆಸಿದ್ದಾನೆ. ಆದರೂ ಕೂಡ ನನಗೆ ಗಂಡ ಸಂಗಮೇಶ್ ಬೇಕು ಎಂದು ಸವಿತಾ ಪರಿತಪಿಸುತ್ತಿದ್ದಾರೆ.
ಪೀಡಿಸುವ ಗಂಡಂದಿರ ಕಾಟ ತಪ್ಪಿದರೆ ಸಾಕು ಎನ್ನುವ ಈ ಕಾಲದಲ್ಲಿ ಸವಿತಾಳಂತಹ ಮಹಿಳೆಯರು ಇದ್ದಾರೆ ಎಂಬುದು ಎಲ್ಲರಿಗೂ ಆಶ್ಚರ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv