6 ಮಂದಿ, 2 ದಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‍ರೇಪ್

Public TV
1 Min Read
GANGRAPE 1

ರಾಂಚಿ: 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಚಕ್ರಧರ್ಪುರದಲ್ಲಿ ನಡೆದಿದೆ.

ಸಂತ್ರಸ್ತೆ ಒಡಿಶಾದ ರೌರ್ಕೆಲಾದ ಮೂಲದವಳಾಗಿದ್ದು, ಆಕೆಯ ಸಹೋದರನ ಸ್ನೇಹಿತ ಆಕೆಯನ್ನು ಅಪಹರಿಸಿ ಚಕ್ರಧರ್ಪುರದ ಲೋಟಪಹಾರ್ ಪ್ರದೇಶದ ಒಂದು ಮನೆಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಆತನೊಂದಿಗೆ ಐವರು ಸೇರಿಕೊಂಡು ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ನಂತರ ಜನವರಿ 1ರಂದು ವಿದ್ಯಾರ್ಥಿನಿಯನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ.

RAPE

ಘಟನೆ ವಿವರ:
ಸಂತ್ರಸ್ತೆ ಡಿಸೆಂಬರ್ 30 ರಂದು ಜಾರ್ಸಗುಡದಲ್ಲಿರುವ ತನ್ನ ಮನೆಗೆ ತೆರಳಲೆಂದು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಈ ವೇಳೆ ಸಹೋದರನ ಸ್ನೇಹಿತ ಸಂತ್ರಸ್ತೆಯನ್ನು ಭೇಟಿಯಾಗಿ ಮಾತನಾಡಿಸಿ ಮನೆಗೆ ಹೋಗಲು ತನ್ನೊಂದಿಗೆ ಬೇರೆ ರೈಲು ಹತ್ತುವಂತೆ ಹೇಳಿದ್ದಾನೆ. ಅದರಂತೆಯೇ ಸಂತ್ರಸ್ತೆ ಆತನ ಜೊತೆ ರೈಲು ಹತ್ತಿದ್ದಾಳೆ. ಆದ್ರೆ ತಾನು ಹೋಗುತ್ತಿರುವ ರೈಲು ತನ್ನ ಮನೆಯ ಚಕ್ರಧರ್ಪುರದ ಕಡೆಗೆ ಹೋಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆಗ ಆರೋಪಿ ಸ್ನೇಹಿತ ಜಾರ್ಖಂಡ್‍ನ ಲೋಟಪಹಾರ್ ರೈಲ್ವೆ ನಿಲ್ದಾಣದಲ್ಲಿ ಕೆಳಗಿಳಿದು ಅಲ್ಲಿಂದ ಬಸ್ಸಿನಲ್ಲಿ ಮನೆಗೆ ಹೋಗಬೇಕೆಂದು ಹೇಳಿದ್ದಾನೆ ಎಂದು ರೌರ್ಕೆಲಾ ಎಸ್‍ಪಿ ಅಜಯ್ ಪ್ರತಾಪ್ ಸ್ವೈನ್ ಅವರು ಹೇಳಿದ್ದಾರೆ.

ಸಂತ್ರಸ್ತೆ ಲೋಟಪಾಹಾರ್ ತಲುಪಿದ ನಂತರ ಆರೋಪಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಈತನ ಜೊತೆ ಐದು ಮಂದಿ ಸೇರಿಕೊಂಡು ಎರಡು ದಿನಗಳ ಕಾಲ ಕೂಡಿಹಾಕಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆಯನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ. ಬಳಿಕ ಎಚ್ಚರಗೊಂಡ ಸಂತ್ರಸ್ತೆ ಸ್ಥಳೀಯ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

RAPE 1

ಸದ್ಯಕ್ಕೆ ಸಂತ್ರಸ್ತೆ ರೂರ್ಕೆಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ತನಿಖೆ ಮಾಡಲು ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದುವರೆಗೂ ಯಾರನ್ನು ಕೂಡ ಬಂಧಿಸಿಲ್ಲ ಎಂದು ಎಸ್‍ಪಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *