– ವರದಿ ಪ್ರಸಾರವಾಗುತ್ತಿದ್ದಂತೆ ಗೋಕಾಕ್‍ನಲ್ಲಿ ಕೇಬಲ್ ಕಟ್
ಬೆಳಗಾವಿ: ಅಧಿಕಾರದಿಂದ ಹತಾಶರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಎಂದು ಸುದ್ದಿ ಮಾಡಲು ಹೋದ ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.
ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ನಿವಾಸದಲ್ಲಿ ಇಂದು ಕಾಣಿಸಿಕೊಂಡಿದ್ದಾರೆ. ಗೋಕಾಕ್ ಮಿಲ್‍ನಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಅರ್ಧಗಂಟೆ ಜಾರಕಿಹೊಳಿ ಆಟವಾಡಿದ್ದಾರೆ.
ಜಾರಕಿಹೊಳಿ ಬಂದಿರುವ ವಿಚಾರ ತಿಳಿದ ಮಾಧ್ಯಮದ ವ್ಯಕ್ತಿಗಳು ಬ್ಯಾಡ್ಮಿಂಟನ್ ಕೋರ್ಟ್‍ಗೆ ಆಗಮಿಸಿದ್ದರು. ಭದ್ರತಾ ಸಿಬ್ಬಂದಿಗೆ ರಮೇಶ್ ಜಾರಕಿಹೊಳಿ ಮಾಧ್ಯಮಗಳ ವ್ಯಕ್ತಿಗಳನ್ನು ಒಳಗಡೆ ಬಿಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಗೇಟ್ ನಲ್ಲೇ ಮಾಧ್ಯಮಗಳನ್ನು ತಡೆದರು.
ಬ್ಯಾಡ್ಮಿಂಟನ್ ಆಟವಾಡಿ ನಿವಾಸಕ್ಕೆ ಬಂದಾಗ ಅಲ್ಲೇ ಇದ್ದ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗುತ್ತಿದ್ದಾಗ, ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಹುಚ್ಚರಿದೀರಿ ಎಂದು ರಮೇಶ್ ಅವಾಜ್ ಹಾಕಿದ್ದಾರೆ.
ರಮೇಶ್ ಜಾರಕಿಹೊಳಿ ಪತ್ರಕರ್ತರಿಗೆ ಅವಾಜ್ ಹಾಕಿದ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಳಗ್ಗೆ ಗೋಕಾಕ್‍ನಲ್ಲಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಕಳೆದ ಎಂಟು ದಿನಗಳಿಂದ ಅಜ್ಞಾತವಾಗಿದ್ದ ರಮೇಶ್ ಬುಧವಾರ ಪ್ರತ್ಯಕ್ಷರಾಗಿದ್ದಾರೆ. ಬುಧವಾರ ತಡರಾತ್ರಿ ರಮೇಶ್ ಜಾರಕಿಹೊಳಿ ಮನೆಗೆ ಬಂದಿದ್ದು, ಹತ್ತನೇ ದಿನಕ್ಕೆ ಅವರು ಎಲ್ಲರ ಮುಂದೆ ಕಾಣಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv