2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

Public TV
3 Min Read
Children

ಸಿನಿಮಾ ತಾರೆಯರ ಬಗ್ಗೆ ತಿಳಿದುಕೊಳ್ಳಲು ಬಹುತೇಕರು ಇಷ್ಟಪಡುತ್ತಾರೆ. ತೆರೆಯ ಮೇಲೆ ಅಬ್ಬರಿಸಿ, ಬೊಬ್ಬಿರಿಯುವ ತಾರೆಯರ ಖಾಸಗಿ ಜೀವನ ಹೇಗಿರುತ್ತೆ ಎಂಬ ಕುತೂಹಲವನ್ನು ಹೊಂದಿರುತ್ತಾರೆ. 2018ರಲ್ಲಿ ಹಲವು ಕಲಾವಿದರು ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂತೆಯೇ ಹಲವು ಕಲಾವಿದರು ನಿಜ ಜೀವನದಲ್ಲಿ ಪೋಷಕ ಸ್ಥಾನಕ್ಕೆ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ವರ್ಷ ತಂದೆ/ತಾಯಿ ಸ್ಥಾನಕ್ಕೆ ಪದವಿ ಪಡೆದ ತಾರೆಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದನ್ನೂ ಓದಿ: 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

1. ನಿಖಿತಾ ತುಕ್ರಾಲ್:
ನಿಖಿತಾ 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದರು. ನಿಖಿತಾ ತಮ್ಮ ಮಗುವಿನೊಂದಿಗೆ ಇರುವ ಫೊಟೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ನಿಖಿತಾ ಮಗುವಿಗೆ `ಜಸ್ಮಿರಾ’ ಎಂದು ಹೆಸರಿಟ್ಟಿದ್ದು, ನಿಖಿತಾ ಸ್ಯಾಂಡಲ್‍ವುಡ್ ನಲ್ಲಿ ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು.

Nikita Sunny

2. ಸನ್ನಿ ಲಿಯೋನ್:
2017ರಲ್ಲಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದ ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೂಲಕ ಮತ್ತೆರಡು ಮಕ್ಕಳಿಗೆ ತಾಯಿಯಾದ್ರು. ಮಾರ್ಚ್ 5ರಂದು ಸನ್ನಿ ಲಿಯೋನ್, ನಾನು ಮತ್ತು ಡೇನಿಯಲ್ ಮಕ್ಕಳಿಗಾಗಿ ಬಾಡಿಗೆ ತಾಯಿಯ ಮೊರೆ ಹೋಗಿದ್ದೇವೆ. ಇಂದು ನಮ್ಮ ಕುಟುಂಬ ಪರಿಪೂರ್ಣವಾಗಿದ್ದು, ಮಕ್ಕಳಿಗೆ ಕಿರೆನ್ ಮತ್ತು ನೋಹಾ ಎಂದು ಹೆಸರಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

3. ಅನು ಪ್ರಭಾಕರ್:
ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಸ್ವಾತಂತ್ರ್ಯ ದಿನಾಚರಣೆಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಇದನ್ನೂ ಓದಿ: 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

anu hema

4. ಹೇಮಾ ಪಂಚಮುಖಿ:
‘ಅಮೆರಿಕಾ ಅಮೆರಿಕಾ’ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ ನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೇಮಾ ಭರತನಾಟ್ಯ ಅಭಿನೇತ್ರಿಯಾಗಿದ್ದು, ‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಹೇಮಾ ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯಕ್ಕೆ ಹೇಮಾ ಹಾಗೂ ಅವರ ಪತಿ ಪ್ರಶಾಂತ್ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.

5. ನೇಹಾ ಧುಪಿಯಾ:
ಮದುವೆಯಾದ ಆರು ತಿಂಗಳಿಗೆ ನಟಿ ನೇಹಾ ಧುಪಿಯಾ ಹೆಣ್ಣು ಮಗುವಿಗೆ ನವೆಂಬರ್ 18ರಂದು ಜನ್ಮ ನೀಡಿದ್ದರು. ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ಅಂಗದ್ ಬೇಡಿ ಜೊತೆ ಮೇ ತಿಂಗಳಲ್ಲಿ ಯಾರಿಗೂ ತಿಳಿಸದೇ ಖಾಸಗಿಯಾಗಿ ನವದೆಹಲಿಯ ಗುರುದ್ವಾರದಲ್ಲಿ ಮದುವೆ ಆಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು

Neha ajay

6. ಅಜಯ್ ರಾವ್:
ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ನವೆಂಬರ್ 23ರಂದು ಹೆಣ್ಣು ಮಗುವಿಗೆ ತಂದೆಯಾದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್ ಅಂದೇ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ಹಾಕಿಕೊಂಡು ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

7. ಯಶ್:
ಚಂದನವನದ ಮಿಸ್ಟರ್ ರಾಮಾಚಾರಿ ಡಿಸೆಂಬರ್ 2ರಂದು ಹೆಣ್ಣು ಮಗುವಿನ ತಂದೆಯಾದರು. ಪತ್ನಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

yashs s

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *