ಕೆ.ಸಿ ವೇಣುಗೋಪಾಲ್ ವರ್ತನೆಗೆ ಕಾಂಗ್ರೆಸ್‍ನಲ್ಲೇ ಅಸಮಾಧಾನ..!

Public TV
1 Min Read
VENUGOPAL

ಬೆಂಗಳೂರು: ಖಾತೆ ಹಂಚಿಕೆ ಅಧಿಕೃತ ಪ್ರಕಟಣೆಯ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ನಾನೇ ಸುಪ್ರೀಂ ಎಂಬಂತೆ ನಡೆದುಕೊಂಡ ವೇಣುಗೋಪಾಲ್ ವರ್ತನೆಗೆ ಇದೀಗ ಕಾಂಗ್ರೆಸ್ ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳಿಗೆ ಕೊಡಬೇಕಾದ ಪಟ್ಟಿ ಬಹಿರಂಗವಾಗಿದೆ. ಪಕ್ಷ ನಿರ್ಧರಿಸಿದ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸುತ್ತಿದ್ದಂತೆಯೇ ಇತ್ತ ವೇಣುಗೋಪಾಲ್ ಅವರು ಪಟ್ಟಿ ಬಹಿರಂಗಪಡಿಸಿದ್ದಾರೆ. ವೇಣುಗೋಪಾಲ್ ಅವರ ಈ ವರ್ತನೆಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಎದ್ದಿದೆ.

CM HDK 1

ಸಾಮಾನ್ಯವಾಗಿ ಖಾತೆ ಹಂಚಿಕೆ ಮುಖ್ಯಮಂತ್ರಿಯಿಂದ ರಾಜಭವನಕ್ಕೆ ಪಟ್ಟಿ ರವಾನೆ ಎಲ್ಲದರು ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಆದರೆ ಮೊದಲ ಬಾರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೇ ಪಟ್ಟಿಯನ್ನು ಬಹಿರಂಗವಾಗಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ರಾಜ್ಯ ಉಸ್ತುವಾರಿಯಾದ ನಾನೇ ಸುಪ್ರೀಂ ಎಂಬ ವೇಣುಗೋಪಾಲ್ ವರ್ತನೆ ಬಗ್ಗೆ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಧಾನ ವ್ಯಕ್ತವಾಗಿದೆ. ಇದನ್ನು ಹೈಕಮಾಂಡ್ ಗಮನಕ್ಕೆ ತರಲು ರಾಜ್ಯದ ವೇಣುಗೋಪಾಲ್ ವಿರೋಧಿ ಬಣ ತೀರ್ಮಾನ ಮಾಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸಚಿವರ ಖಾತೆ ಅದಲು-ಬದಲು:
* ಎಂ.ಬಿ.ಪಾಟೀಲ್ – ಗೃಹ ಇಲಾಖೆ
* ತುಕಾರಾಂ – ಡಿಕೆಶಿವಕುಮಾರ್ ಬಳಿ ಇದ್ದ ವೈದ್ಯಕೀಯ ಶಿಕ್ಷಣ
* ಸತೀಶ್ ಜಾರಕಿಹೊಳಿ – ಅರಣ್ಯ
* ಸಿ.ಎಸ್.ಶಿವಳ್ಳಿ – ಪೌರಾಡಳಿತ
* ಪರಮೇಶ್ವರ್ ನಾಯ್ಕ್ – ಮುಜರಾಯಿ, ಕೌಶಲಾಭಿವೃದ್ಧಿ

DINESH GUNDURAO
* ರಹೀಂ ಖಾನ್ – ಯುವಜನ ಸೇವೆ, ಕ್ರೀಡೆ
* ಆರ್.ಬಿ.ತಿಮ್ಮಾಪುರ್ – ಸಕ್ಕರೆ, ಬಂದರು, ಜಲಸಾರಿಗೆ
* ಎಂಟಿಬಿ ನಾಗರಾಜ್ – ವಸತಿ
* ಡಾ.ಜಿ ಪರಮೇಶ್ವರ್- ಕೃಷ್ಣ ಬೈರೇಗೌಡ ಬಳಿ ಇದ್ದ ಕಾನೂನು-ಸಂಸದೀಯ ವ್ಯವಹಾರ ಖಾತೆ, ಐಟಿ-ಬಿಟಿ ಖಾತೆ
* ಡಿಕೆ ಶಿವಕುಮಾರ್- ಜಯಮಾಲ ಬಳಿ ಇದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *