ಪ್ರಧಾನಿ ಮಂತ್ರಿ ಕನಸನ್ನೇ ಭಗ್ನ ಮಾಡಿದವ ಬಂಧನ

Public TV
1 Min Read
MODI FAKE NOTE copy

ಬೆಂಗಳೂರು: ಪ್ರಧಾನಮಂತ್ರಿ ಕನಸನ್ನೇ ಭಗ್ನ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಅಬ್ದುಲ್ ಖಾದೀರ್ (32) ಎಂದು ಗುರುತಿಸಲಾಗಿದೆ.

ಪಶ್ಚಿಮ ಬಂಗಾಳ ಮೂಲದ ಈತ ಖೋಟಾ ನೋಟ್‍ನ ಕಿಂಗ್‍ಪಿನ್ ಆಗಿದ್ದು, ಕರ್ನಾಟಕ ಎನ್‍ಐಎಯಿಂದ ಅಬ್ದುಲ್ ಖಾದೀರ್ ನನ್ನು ಬಂಧಿಸಲಾಗಿದೆ.

vlcsnap 2018 12 25 10h03m44s111

ಖಾದೀರ್ ಭಾರತಕ್ಕೆ ಖೋಟಾ ನೋಟ್ ತರೋ ಕಿಂಗ್‍ಪಿನ್ ಆಗಿದ್ದನು. ಬಾಂಗ್ಲಾದೇಶದಿಂದ ಭಾರತಕ್ಕೆ ಕೋಟಿ ಕೋಟಿ ಖೋಟಾ ನೋಟು ತಂದಿದ್ದನು. ಬರೋಬ್ಬರಿ 5 ಕೋಟಿ ರೂಪಾಯಿ ಹಳೆಯ ನೋಟುಗಳ ತಂದಿದ್ದನು. ಇಡೀ ದೇಶದಲ್ಲಿ ಖೋಟಾ ನೋಟುಗಳು ಹರಿದಾಡೋದಕ್ಕೆ ಈತನೇ ರೂವಾರಿ ಎನ್ನಲಾಗಿದೆ.

ಹೊಡೆದ್ರೆ ಆನೆಯನ್ನೇ ಹೊಡಿಬೇಕು ಅನ್ನೋದು ಇವನ ಟಾರ್ಗೆಟ್ ಆಗಿತ್ತು. ಹೀಗಾಗಿ 100, 200 ನೋಟನ್ನೇ ಖೋಟಾ ಮಾಡಿದ್ರೆ ಏನು ಗಿಟ್ಟೋದಿಲ್ಲ. ಮಾಡಿದ್ರೆ 2000 ರೂಪಾಯಿ ನೋಟನ್ನೇ ಖೋಟಾ ಮಾಡ್ಬೇಕು ಅಂದುಕೊಂಡಿದ್ದು, ಈತನ ಕೈಯಲ್ಲಿ ಖೋಟಾ ನೋಟುಗಳು ಸೇರಿದ ಮೇಲೆ ಭಾರತ ದೇಶಕ್ಕೆಲ್ಲಾ ಸಂಚಾರ ಮಾಡುತ್ತಿದ್ದವು ಎಂಬ ಮಾಹಿತಿಗಳು ಲಭ್ಯವಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *