– ಕಾಗಿಣಾ ನದಿಯ ನೀರು ನಮ್ದು ಅಂತಾ ಫೈಟ್
ಕಲಬುರಗಿ: ಕಾಗಿಣಾ ನದಿಯ ನೀರಿಗಾಗಿ ನೆರೆಯ ರಾಜ್ಯವಾದ ತೆಲಂಗಾಣ ರೈತರು ಚಿಂಚೋಳಿ ತಾಲೂಕಿನ ಗಡಿಯಲ್ಲಿರುವ ಕಿರಿಕ್ ಮಾಡಿದ್ದಾರೆ.
ಕಾಗಿಣಾ ನದಿ ಕರ್ನಾಟಕ ಹಾಗೂ ತೆಲಂಗಾಣದ ಗಡಿ ಪ್ರದೇಶದಲ್ಲಿದೆ. ಈ ನದಿ ನಮಗೆ ಸೇರಿದೆ ಎಂದು ತೆಲಂಗಾಣದ ಕ್ಯಾದಗೇರಾ ಗ್ರಾಮಸ್ಥರು ಕ್ಯಾತೆ ತೆಗೆದಿದ್ದಾರೆ. ಆದರೆ ಕರ್ನಾಟಕದ ಕೋತಂಗಲ್ ಗ್ರಾಮಸ್ಥರು ಇದು ನಮಗೆ ಸೇರಿದ್ದು ಎಂದು ವಾದ ಮಾಡಿಸಿದ್ದಾರೆ. ಈ ವೇಳೆ ಎರಡು ರಾಜ್ಯಗಳ ನಡುವೆ ವಾಗ್ವಾದ ಕೂಡ ನಡೆದಿದೆ.
ಎರಡು ರಾಜ್ಯಗಳ ರೈತರ ಜಗಳ ಕುರಿತು ಮಾಹಿತಿ ಪಡೆದ ಹಿರಿಯ ಪೊಲೀಸರು ಹಾಗೂ ಎರಡು ರಾಜ್ಯಗಳ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಯಾವುದೇ ರೀತಿಯ ವಾಗ್ವಾದಕ್ಕೂ ಮುಂದಾಗಬೇಡಿ ಈ ಕುರಿತು ಕಾನೂನಿನ ಅಡಿ ಕ್ರಮಕೈಗಳ್ಳುತ್ತೇವೆ. ಗ್ರಾಮಸ್ಥರು ನಮಗೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.
ಪೊಲೀಸರು ಹಾಗೂ ಅಧಿಕಾರಿಗಳ ನಡುವೆಯೂ ತೆಲಂಗಾಣ ಗ್ರಾಮಸ್ಥರು ಮಾತುಕತೆ ನಡೆಸಿದ್ದು, ಅಧಿಕಾರಿಗಳ ಬಳಿಯೂ ಇದು ನಮ್ಮದೇ ಪ್ರದೇಶ ಎಂದು ವಾದ ಮಂಡಿಸಿದ್ದಾರೆ. ಈ ವೇಳೆ ಎರಡು ರಾಜ್ಯಗಳ ಅಧಿಕಾರಿಗಳು ಯಾವುದೇ ಅಹಿತಕರ ನಡೆಯದಂತೆ ಗ್ರಾಮಸ್ಥರ ಮನವೊಲಿಕೆ ಮಾಡಿದ್ದು, ಸಮಸ್ಯೆಯನ್ನು ಕಾನೂನು ಮೂಲಕ ಬಗೆಹರಿಸುವ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv