ಸದನದಲ್ಲಿ ಮೊಬೈಲ್ ಬಳಕೆ- ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

Public TV
1 Min Read
N Mahesh A

ಬೆಳಗಾವಿ: ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್ ಮಹೇಶ್ ಅವರು, ನಾನು ಸುಮ್ಮನೆ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಇವತ್ತು ಸದನದಲ್ಲಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ. ಆದರೆ ಯಾವುದೇ ಕಾರಣವಿದ್ದರು ಮೊಬೈಲ್ ತಂದಿದ್ದು ನನ್ನ ತಪ್ಪು ಅಂತಾ ಹೇಳಿದರು.

n mahesh

ಇದೇ ವೇಳೆ ವಾಟ್ಸಾಪ್ ನಲ್ಲಿ ಯುವತಿಯ ಫೋಟೋ ವಿಕ್ಷೀಸಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗನಿಗೆ ಮದುವೆ ಸಿದ್ಧತೆಯಲ್ಲಿದ್ದು, ಈ ಬಗ್ಗೆ ಸೂಕ್ತ ವಧುವಿನ ಬಗ್ಗೆ ಮಾಹಿತಿ ನೀಡಲು ನನ್ನ ಸ್ನೇಹಿತ ಶಿವಕುಮಾರ್ ಎಂಬವರಿಗೆ ಮಾಹಿತಿ ನೀಡಿದ್ದೆ. ಅವರು ಕಳುಹಿಸಿದ ಫೋಟೋಗಳನ್ನೆ ನಾನು ನೋಡಿದ್ದು. ಆದರೆ ಅದನ್ನು ಪ್ರಸಾರ ಮಾಡಿದ್ದು, ವೃತ್ತಿ ಧರ್ಮ ಅಲ್ಲ ಎಂದರು. ಇದನ್ನೂ ಓದಿ: ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *