ಚಂಡಿಗಡ: ಹರ್ಯಾಣದ ನವಜೋಡಿಯೊಂದು ತಮ್ಮ ಮದುವೆಯಲ್ಲಿ 7 ಸಪ್ತಪದಿ ಬದಲು 9 ಸಪ್ತಪಡಿ ತುಳಿದು ಒಬ್ಬರಿಗೊಬ್ಬರು ಹೊಸ ಭರವಸೆಯನ್ನು ಮಾಡಿಕೊಂಡರು.
ಸಂದೀಪ್ ಹಾಗೂ ದೀಪಿಕಾ ಇಬ್ಬರು ಸಿವಾನಿ ಮಂಡಿಯಲ್ಲಿ ಮದುವೆಯಾಗಿದ್ದಾರೆ. ಉಪಮಂಡಲ್ ಗ್ರಾಮದ ಸಂದೀಪ್ ಚೌವ್ಹಾನ್ ಸಮಾಜಿಕ ಕಾರ್ಯಕರ್ತರಾಗಿದ್ದು, ತಮ್ಮ ಮದುವೆಯಲ್ಲಿ ಒಂಭತ್ತು ಸಪ್ತಪದಿ ತುಳಿದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಸಂದೀಪ್ ಪರಿಸರವನ್ನು ರಕ್ಷಿಸಲು ಗಿಡಗಳನ್ನು ಬೆಳೆಸುತ್ತೇವೆಂದು ತನ್ನ ಜೀವನ ಸಂಗಾತಿ ದೀಪಿಕಾ ಅವರ ಜೊತೆ 8ನೇ ಸಪ್ತಪದಿ ತುಳಿದರು. ಬಳಿಕ ‘ಭೇಟಿ ಬಜಾವ್, ಭೇಟಿ ಪಡಾವ್’ ಸಂಕಲ್ಪ ಮಾಡಿ ಒಂಭತ್ತನೇ ಸಪ್ತಪದಿ ತುಳಿದಿದ್ದಾರೆ. ಪುರೋಹಿತರು ಅಗ್ನಿಯನ್ನು ಸಾಕ್ಷಿಯನ್ನಾಗಿ ಮಾಡಿ ನವಜೋಡಿಯನ್ನು ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ಅವಕಾಶ ಕೊಟ್ಟರು. ಸಂದೀಪ್ ಹಾಗೂ ದೀಪಿಕಾ ಅವರ ಈ ವಿಶೇಷ ಮದುವೆ ಈಗ ಆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ಸಂದೀಪ್ ಹಾಗೂ ದೀಪಿಕಾ ಮದುವೆಯಾಗಿ ಮನೆಗೆ ಹೋದಾಗ ತಮ್ಮ ಗ್ರಾಮದಲ್ಲಿ ಗಿಡವೊಂದನ್ನು ನೆಟ್ಟಿದ್ದಾರೆ. ನಾವು ಮಾತ್ರ ಗಿಡ ನೆಡದೇ, ಎಲ್ಲರಿಗೂ ಗಿಡ ನೆಡೆಸಲು ಜಾಗೃತಿ ಮೂಡಿಸುತ್ತೇವೆ ಎಂದು ಸಂಕಲ್ಪ ಮಾಡಿದರು. ಅಲ್ಲದೇ ಭೇಟಿ ಪಡಾವ್, ಭೇಟಿ ಬಚಾವ್ ಅಭಿಯಾನದ ಬಗ್ಗೆ ಕೂಡ ಜಾಗೃತಿ ಮೂಡಿಸುವುದಾಗಿ ಸಂಕಲ್ಪ ಮಾಡಿದರು. ಎರಡು ಗ್ರಾಮದಲ್ಲೂ ಗಿಡವನ್ನು ನೆಟ್ಟು ಅದನ್ನು ನೋಡಿಕೊಳ್ಳುತ್ತೇವೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಸಾಕಾರಾತ್ಮಕ ಮನೋಭಾವವನ್ನು ಇರಿಸುವುದಾಗಿ ಭರವಸೆ ನೀಡಿದ್ದರು.
ಸಂದೀಪ್ ಚೌಹ್ವಾನ್ ಅವರ ಮದುವೆ ಯಾವಾಗ ದೀಪಿಕಾ ಅವರ ಜೊತೆ ನಿಶ್ಚಾಯವಾಯಿತ್ತೋ ಆಗ ಅವರು ಮದುವೆ ಮಂಟಪದಲ್ಲಿ ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ನಿರ್ಧರಿಸಿದ್ದರು. ಸಂದೀಪ್ ಅವರ ಈ ನಿರ್ಧಾರಕ್ಕೆ ದೀಪಿಕಾ ಅವರು ಕೂಡ ಒಪ್ಪಿಗೆ ಸೂಚಿಸಿದ್ದರು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ನಡೆಯುವಾಗ ಸಂದೀಪ್ ಅವರು ಇಚ್ಛಿಸಿದ್ದಂತೆ ಒಂಭತ್ತು ಸಪ್ತಪದಿ ತುಳಿದರು. ಒಂಭತ್ತು ಸಪ್ತಪದಿ ತುಳಿದು ಖುಷಿಯಾಗುತ್ತಿದೆ ಹಾಗೂ ನಮಗೆ ಮೊದಲು ಹೆಣ್ಣು ಮಗಳು ಆಗಲಿ ಎಂದು ಇಷ್ಟಪಡುತ್ತೇವೆ ಎಂದು ನವಜೋಡಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv