ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತೆ ಶೂಟಿಂಗ್‍ಗೆ ಹಾಜರಾಗಿದ್ದಾರೆ.
ಅಪ್ಪನ ಸಾವಿನಿಂದ ಕಂಗಾಲಾಗಿದ್ದ ಅಭಿ ಮನಸ್ಸಿಗೆ ಕೊಂಚ ಸಮಾಧಾನ ತಂದುಕೊಂಡು `ಅಮರ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹದ್ದೇ ಸಂದರ್ಭ ರೆಬೆಲ್ ಸ್ಟಾರ್ ಅಂಬರೀಶ್‍ಗೂ ಎದುರಾಗಿತ್ತು. ಪಡುವಾರಳ್ಳಿ ಪಾಂಡವರು ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾಗ ಅಂಬರೀಶ್ ಅವರ ತಂದೆ ಹುಚ್ಚೇಗೌಡ್ರು ಕೊನೆಯುಸಿರೆಳೆದ್ದರು. ಇದನ್ನೂ ಓದಿ: ಅಪ್ಪನ ಫೋಟೋ ಹಿಡಿದು ಕೆಲಸಕ್ಕೆ ಹೊರಟ್ರು ಅಭಿಷೇಕ್ ಅಂಬರೀಶ್
ತಂದೆಯ ಅಂತ್ಯಸಂಸ್ಕಾರ ಮುಗಿಸಿ ಮೂರೇ ದಿನದಲ್ಲಿ ಮತ್ತೆ ಶೂಟಿಂಗ್‍ಗೆ ಅಂಬರೀಶ್ ಹಾಜರಾಗಿದ್ದರು. ಇದೀಗ ಮಗ ಕೂಡ ಅಪ್ಪನ ಆದರ್ಶವನ್ನ ಪಾಲಿಸಿದ್ದಾರೆ. ಸೆಟ್‍ನಲ್ಲಿ ಅಂಬಿ ಫೋಟೋಗೆ ಪೂಜೆ ಸಲ್ಲಿಸಿ ನಂತರ ಶೂಟಿಂಗ್ ಶುರು ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ವೆಗಾಸಿಟಿ ಮಾಲ್‍ನಲ್ಲಿ ಅಮರ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನ ರವಿವರ್ಮಾ ಕಂಪೋಸ್ ಮಾಡ್ತಿದ್ದಾರೆ. ಅದರ ಎಕ್ಸ್ ಕ್ಲೂಸೀವ್ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. `ಅಮರ್’ ಅಭಿಷೇಕ್ ನಟನೆಯ ಚೊಚ್ಚಲ ಸಿನಿಮಾವಾಗಿದ್ದು, ನಾಗಶೇಖರ್ ನಿರ್ದೇಶನ ಮಾಡ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv