ಸಚಿವ ಡಿಕೆಶಿಗೆ ಬಿ.ವೈ ವಿಜಯೇಂದ್ರ ಸವಾಲ್

Public TV
1 Min Read
DEEKESHI BYV

ಬೆಂಗಳೂರು: ಆಪರೇಷನ್ ಕಮಲವನ್ನು ಬಿಜೆಪಿ ಮಾಡುತ್ತಿರುವುದು ಸತ್ಯ. ಈ ಬಗ್ಗೆ ಸಮಯ ಸಂದರ್ಭ ಬಂದಾಗ ರಿವೀಲ್ ಮಾಡ್ತೀನಿ ಅಂದಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ ವಿಜಯೇಂದ್ರ ಸವಾಲು ಹಾಕಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಏನಿದೆಯೋ ಅದನ್ನು ಬಿಡುಗಡೆ ಮಾಡಲಿ. ತುಂಬಾ ಸಂತೋಷ. ಅದನ್ನು ಯಾರೂ ಆಕ್ಷೇಪಣೆ ಮಾಡುತ್ತಿಲ್ಲ. ಸಮಯ ಸಂದರ್ಭ ಯಾಕೆ ಕಾಯ್ತಾರೆ. ಅವರು ಈಗಲೇ ಬಿಡುಗಡೆ ಮಾಡಲಿ. ನಮ್ಮದು ಯಾವುದೇ ರೀತಿಯ ಅಭ್ಯಂತರವಿಲ್ಲ ಅಂತ ಹೇಳಿದ್ರು.

BJP DEEKESHI

ವಿನಾಕರಾಣ ಯಡಿಯೂರಪ್ಪ, ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಿಮ್ಮ ಸರ್ಕಾರವನ್ನು ನೀವು ಸರಿಯಾದ ದಾರಿಯಲ್ಲಿ ತಗೆದುಕೊಂಡು ಹೋಗಿದ್ದೆ ಆದ್ರೆ ಸರ್ಕಾರವನ್ನು ಬೀಳಿಸುವಂತಹ ಕೆಲಸ ಬರುವುದಿಲ್ಲ ಅಂದ್ರು. ಇದನ್ನೂ ಓದಿ:  ಬಿಜೆಪಿಯವರ ಆಪರೇಷನ್ ಕಮಲಕ್ಕೆ ಔಷಧಿ ನಮ್ಮ ಬಳಿಯಿದೆ – ಡಿಕೆಶಿ

ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಸಂತಸದ ವಿಚಾರ. ಗುಪ್ತಚರ ಇಲಾಖೆ ಅವರ ಹತ್ತಿರವೇ ಇದೆ ಅನ್ನೋದು ಇಡೀ ರಾಜ್ಯ ಹಾಗೂ ದೇಶಕ್ಕೆ ಗೊತ್ತಿದೆ. ಯಡಿಯೂರಪ್ಪ ಅವರಾಗಲಿ ಅಥವಾ ಭಾರತೀಯ ಜನತಾ ಪಕ್ಷದ ಯಾರನ್ನೇ ಆಗಲಿ ಈ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ನಾವ್ಯಾರು ಮಾಡುತ್ತಿಲ್ಲ. ಅವರ ಪಕ್ಷದಲ್ಲಿರುವ ಅತೃಪ್ತ ಶಾಸಕರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ತಮ್ಮ ಸ್ವ-ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ಇವರುಗಳಿಗೂ ಭಾರತೀಯ ಜನತಾ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿದ್ರು.

Congress JDS

ಕಾಂಗ್ರೆಸ್, ಜೆಡಿಎಸ್‍ನ ಹಿರಿಯ ಸಚಿವರು ಬಿಜೆಪಿ ಪಿತೂರಿ ನಡೆಸುತ್ತಿದೆ ಅಂತ ಹೇಳುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದುದ್ದಾಗಿದೆ. 2 ಪಕ್ಷದವರು ಕಟ್ಟು ಕತೆಗಳನ್ನು ಸೃಷ್ಟಿಸಿ ರಾಜ್ಯದ ಜನರಿಗೆ ತಪ್ಪು ಸಂದೇಶವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಗರಂ ಆದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *