ಸರ್ಕಾರಕ್ಕೆ ಹಣ ನೀಡಲ್ಲ, ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ಮನೆ : ಸುಧಾಮೂರ್ತಿ

Public TV
1 Min Read
Sudha Murthy MND

ಮಂಡ್ಯ: ಸರ್ಕಾರ ನೀಡಿದ ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ನಮ್ಮ ತಂಡ ಮನೆ ಕಟ್ಟಿಕೊಡಲಿದೆ. ಅದಕ್ಕಾಗಿ ನಮ್ಮ ಸಂಸ್ಥೆ ಈಗಾಗಲೇ 25 ಕೋಟಿ ರೂ. ತೆಗೆದಿರಿಸಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದಾರೆ.

ಮಂಡ್ಯದ ಮೇಲುಕೋಟೆಯಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆ ವೇಳೆ ಕೊಡಗು ಸಂತ್ರಸ್ತರಿಗೆ ನೆರವು ನೀಡಿ ಎಂದು ಸರ್ಕಾರ ನಮ್ಮನ್ನ ಕೇಳಿರಲಿಲ್ಲ. ಮನುಷ್ಯನ ದೇಹದಲ್ಲಿ ಒಂದು ಭಾಗಕ್ಕೆ ನೋವಾದರೆ ಇನ್ನೊಂದು ಭಾಗಕ್ಕೆ ನೋವಾದ ಹಾಗೆಯೇ. ಕೊಡಗು ನಮ್ಮ ಕರ್ನಾಟಕದ ಒಂದು ಭಾಗ. ಕೊಡಗಿಗೆ ಕಷ್ಟ ಬಂದಾಗ ನಮ್ಮ ಸಂಸ್ಥೆಯೇ ಸಹಾಯ ಮಾಡುವ ನೀಡುವ ತೀರ್ಮಾನ ಮಾಡಿತ್ತು ಎಂದರು.

vlcsnap 2018 12 02 12h23m45s54

ಇದೇ ವೇಳೆ ಕೊಡುಗೆ ಪ್ರವಾಹಕ್ಕೆ ನೆರವು ನೀಡಿ ಎಂದು ಯಾವ ಮಂತ್ರಿಯಾಗಲೀ ಕೇಳಿರಲಿಲ್ಲ. ಕನ್ನಡಿಗರಿಗಾಗಿ ಏನಾದರು ಮಾಡಬೇಕೆಂದು 25 ಕೋಟಿ ರೂ. ನೀಡುವ ತೀರ್ಮಾನ ನಮ್ಮ ಸಂಸ್ಥೆ ಮಾಡಿತ್ತು. ನಮ್ಮ ಸಂಸ್ಥೆಯ ಮೂಲಕ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ದೇವು. ಬಳಿಕ ಈ ಬಗ್ಗೆ ಸರ್ಕಾರಕ್ಕೆ ಸಂತ್ರಸ್ತರಿಗೆ ಮನೆಕಟ್ಟಿಕೊಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾಗಿ ಹೇಳಿದರು.

ಈ ಹಿಂದೆಯೂ ಕೂಡ ಉತ್ತರ ಕರ್ನಾಟಕದ ಪ್ರವಾಹ ಹಾಗೂ ಆಂಧ್ರಪ್ರದೇಶದ ಪ್ರವಾಹದ ವೇಳೆ ನಮ್ಮ ಸಂಸ್ಥೆಯಿಂದ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ವೇಳೆ ನಾವು ಕೆಲ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸರ್ಕಾರ ಮನೆ ನಿರ್ಮಾಣಕ್ಕೆ ಸರಿಯಾದ ಜಾಗ ತೋರಿಸಬೇಕು, ವಿದ್ಯುತ್ ಹಾಗೂ ಲೇಬರ್ ಕ್ಯಾಂಪಿಗೆ ಜಾಗ ನೀಡಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರವೇ ನೀಡಿದ ನಕ್ಷೆಯಂತೆ ನಮ್ಮ ತಂಡ ಮನೆಗಳನ್ನ ಕಟ್ಟಿಕೊಡಲಿದೆ. ನಾವು ಸರ್ಕಾರಕ್ಕೆ ಹಣ ನೀಡುವುದಿಲ್ಲ. ನಾವೇ ಮನೆ ಕಟ್ಟಿಸಿಕೊಡುತ್ತೇವೆ. ಸರ್ಕಾರ ಜಾಗ ತೋರಿಸಿದ ಮರುದಿನವೇ ನಮ್ಮ ತಂಡ ಕೆಲಸ ಶುರುಮಾಡಲಿದೆ ಎಂದರು.

KODAGU copy

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *