ಸಿಎಂ ಕುಮಾರಸ್ವಾಮಿ ಆರೋಗ್ಯ ಹೇಗಿದೆ? ಪಬ್ಲಿಕ್ ಟಿವಿಗೆ ಹೆಲ್ತ್ ಕಾರ್ಡ್ ಲಭ್ಯ

Public TV
2 Min Read
DELHI HDK

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ಗಾಳಿ ಸುದ್ದಿಗಳು ಬೆಳಗ್ಗೆಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದುಂಟು. ಪದೇ ಪದೇ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಸಾಲುಗಳುಳ್ಳ ಸಂದೇಶಗಳು ಮೊಬೈಲಿನಿಂದ ಮೊಬೈಲಿಗೆ ಸಂಚರಿಸಿವೆ. ಹಾಗಾದ್ರೆ ನಿಜವಾಗಿಯೂ ಮುಖ್ಯಮಂತ್ರಿಗಳ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ನಾಡಿನ ಜನತೆ ಗೊಂದಲಕ್ಕೆ ಒಳಗಾಗಿದ್ದರು. ನಿಮ್ಮ ಪಬ್ಲಿಕ್ ಟಿವಿಗೆ ಸಿಎಂ ಹೆಲ್ತ್ ಕಾರ್ಡ್ ಲಭ್ಯವಾಗಿದೆ.

ಒಂದು ವರ್ಷದ ಹಿಂದೆ ಸಿಎಂ ಆರೋಗ್ಯದಲ್ಲಿ ಏರುಪೇರಾಗಿದ್ದು ನಿಜ. ಈ ಸಂಬಂಧ ಸಿಎಂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರೋದು ನಿಜ. ಬ್ಲಡ್ ಪ್ರೆಷರ್, ಶುಗರ್ ಜೊತೆ ಹಾರ್ಟ್ ಪ್ರಾಬ್ಲಂ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಸಿಎಂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡಿರುವ ಸಿಎಂ ಇಂದು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಹದೆಗೆಟ್ಟ ಆರೋಗ್ಯವನ್ನು ಸಿಎಂ ಸುಧಾರಿಸಿಕೊಂಡಿದ್ದಾರೆ.

cm health 1

ಬದಲಾದ ಜೀವನ ಶೈಲಿ:
ಶಸ್ತ್ರಚಿಕಿತ್ಸೆಗೂ ಮುನ್ನ ಕುಮಾರಸ್ವಾಮಿ ಅವರು ವಾರಕ್ಕೆ ಮೂರ್ನಾಲ್ಕು ಬಾರಿ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮಟನ್, ಚಿಕನ್ ಮತ್ತು ಫಿಶ್ ಇಷ್ಟಪಡುವ ಸಿಎಂ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಸೇವನೆ ಮಾಡುತ್ತಿದ್ದರು. ಈಗ ಎಲ್ಲವು ಬದಲಾಗಿದ್ದು, ಅಪರೂಪಕ್ಕೊಮ್ಮೆ ಮೀನು ಮತ್ತು ಚಿಕನ್ ಸೇವನೆ ಮಾಡುತ್ತಿದ್ದಾರೆ. ಅದನ್ನು ನಿಯಮಿತ ಪ್ರಮಾಣದಲ್ಲಿಯೇ ಒಂದೆರೆಡು ಪೀಸ್ ಅಂತಾ ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡುತ್ತಾರೆ.

ವೈದ್ಯರ ಸಲಹೆ ಮೇರೆಗೆ ಆಹಾರ ಶೈಲಿ ಬದಲಿಸಿಕೊಂಡ ಸಿಎಂ ಬಹುತೇಕ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಇಂದು ಬ್ರಡ್ ಪ್ರೆಶರ್ ಮತ್ತು ಶುಗರ್ ನಿಯಂತ್ರಣಕ್ಕೆ ಬಂದಿದ್ದು, ದಿನಕ್ಕೆ 15 ಗಂಟೆ ಕೆಲಸ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಶುಗರ್ ಕಂಟ್ರೋಲ್ ಗಾಗಿ ಸಿಎಂ ಡಯಟ್ ಚಾರ್ಟ್ ಮತ್ತು ಕ್ರಮಬದ್ಧ ವ್ಯಾಯಾಮದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ.

cm health 3

ಆಹಾರ ಶೈಲಿ:
ಶುಗರ್ ಕಂಟ್ರೋಲ್ ಗಾಗಿ ಸಿಎಂ ಸೊಪ್ಪು, ಕಾಳು ಮತ್ತು ಜ್ಯೂಸ್ ಹೆಚ್ಚು ಸೇವನೆ ಮಾಡುತ್ತಾರೆ. ಬೆಳಗ್ಗೆ 3 ಇಡ್ಲಿ, ಮಧ್ಯಾಹ್ನ ಮುದ್ದೆಯನ್ನು ಆಹಾರದಲ್ಲಿ ಬಳಸುತ್ತಾರೆ. ಇನ್ನು ಹೊರಗಡೆ ಹೋದಾಗ ಸಿಎಂ ಬಹುತೇಕ ಮನೆಯಿಂದಲೇ ಊಟ ಕ್ಯಾರಿ ಮಾಡುತ್ತಾರೆ. ಬೆಳಗ್ಗೆ ತಿಂಡಿಯಾಗಿ 3 ಇಡ್ಲಿ, ಒಂದಿಷ್ಟು ಪ್ರೂಟ್ಸ್, ಮಧ್ಯಾಹ್ನ ಮುದ್ದೆ, ಸಂಜೆ ಸ್ವಲ್ವ ಮೊಸರನ್ನ. ಬಾಯಿ ಚಪಲಕ್ಕೂ ಕುರುಕಲು ತಿಂಡಿ ಮುಟ್ಟೋದೇ ಇಲ್ಲ.

130 ಕೆಜಿ ತೂಕವಿದ್ದರಷ್ಟೇ ಬ್ಯಾರಿಯಾಟ್ರಿಕ್ ಸರ್ಜರಿಗೆ ವೈದ್ಯರು ಸಲಹೆ ನೀಡುತ್ತಾರೆ. ಕುಮಾರಸ್ವಾಮಿ ಅವರ ಸದ್ಯದ ತೂಕ 95 ಕೆಜಿ. ಸಿಎಂ ಲೈಫ್ ಸ್ಟೈಲ್ ಬಹಳಷ್ಟು ಬದಲಾಗಿ ಹೋಗಿದ್ದರಿಂದ ಶುಗರ್, ರಕ್ತದೊತ್ತಡ ಎಲ್ಲವೂ ಕಂಟ್ರೋಲ್‍ಗೆ ಬಂದಿದೆ. ವರ್ಷದ ಕೊನೆಗೆ ಸಿಎಂ ವಿದೇಶಕ್ಕೆ ಹೋಗುವುದು ಸಾಮಾನ್ಯ. ಕಳೆದ ಎರಡ್ಮೂರು ವರ್ಷಗಳಿಂದ ಕುಮಾರಸ್ವಾಮಿ ವಿದೇಶಕ್ಕೆ ಹೋಗುತ್ತಿದ್ದಾರೆ. ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯುವ ಅಗತ್ಯ ಅವರಿಗಿಲ್ಲ. ಇತ್ತೀಚೆಗೆ ತಪಾಸಣೆಗೆ ಒಳಗಾದಾಗ ಎಲ್ಲವು ಕಂಟ್ರೋಲ್ ನಲ್ಲಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರು ಡಾ. ಮಂಜುನಾಥ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

jayadeva

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *